ಸಾಹಿತಿ ಭೀಮರಾವ್ ವಾಷ್ಠರ್ ರವರು ಹಾಡಿದ ನಾಗರಹಾಳ ದಾವಲ್ ಮಲಿಕ್ ದೇವಾ ಭಕ್ತಿಗೀತೆ ಬಿಡುಗಡೆ

0

 

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನಾಗರಹಾಳದ ಹಜರತ್ ದಾವಲಮಲಿಕ್ ದೇವರ ಉರುಸ್ ಜಾತ್ರೆಯ ಸಂದರ್ಭದಲ್ಲಿ ಸುಳ್ಯದ ಸಾಹಿತಿ , ಚಿತ್ರ ನಿರ್ದೇಶಕ ಮತ್ತು ಜ್ಯೋತಿಷಿ ಹಾಗೂ ಗಾಯಕರಾದ ಎಚ್ . ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ , ಹಾಡಿರುವ ನಾಗರಹಾಳ ದಾವಲ್ ಮಲಿಕ್ ದೇವಾ ಎಂಬ ಭಕ್ತಿಗೀತೆಯನ್ನು ಹಜರತ್ ದಾವಲ್ ಮಲಿಕ್ ಅವರ ಭವ್ಯ ದರ್ಗಾದ ಮುಂದೆ ಸಂತ ಶಿಶುನಾಳ ಷರೀಫ್ ಅಜ್ಜನವರ ವಂಶಸ್ಥರಾದ ಜನಾಬ್ ಹುಸೇನ್ ಸಾಬ್ ಶರೀಫನವರ್ ಅವರು ಬಿಡುಗಡೆ ಮಾಡಿದರು .

ಈ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳ , ರಾಜಕೀಯ ಮುಖಂಡರಾದ ಶ್ರೀ ಹೊನ್ನಪ್ಪ ಮೇಟಿ ನಾಗರಹಾಳ, ಚಂದ್ರಶೇಖರಯ್ಯ ಗದ್ಗೀಮಠ ನಾಗರಹಾಳ , ರಾಜಕೀಯ ಮುಖಂಡ ಶ್ರೀ ಸಂಗಣ್ಣ ಭಾವಿಮನಿ ಆನೆಹೊಸೂರ್ , ನಿರುಪಾದಿ ಕವಿಗಳು , ಸುಕ್ಷೇತ್ರ ಸ್ಥಳದಾನಿ ಬಾಲನಗೌಡ , ಶಿಕ್ಷಕ ಶ್ರೀ ನಿಜಲಿಂಗಯ್ಯ ಹಾಲದೇವರಮಠ , ಆಧುನಿಕ ಪ್ರೇಮಕವಿ ವಿಜಯದಾಸ್ ನವಲಿ , ಹುಲ್ಲಪ್ಪ ವಾಲೀಕಾರ್ , ದೇವರಾಜ್ ಚೌಡೇಕೇರ್ , ಹನುಮಂತ್ ವಾಲೀಕಾರ್ ತೊಂಡಿಹಾಳ್ , ಶಂಕರ್ ಭೋವಿ ಬನ್ನಿಗೋಳ್, ಯಂಕೋಬ ಬನ್ನಿಗೋಳ , ಬಸು ಬನ್ನಿಗೋಳ , ಸಲೀಂ ನಾಗರಹಾಳ ಇನ್ನಿತರರು ಉಪಸ್ಥಿತರಿದ್ದರು . ಈ ಮುಂಚೆ 10 ವರ್ಷಗಳ ಹಿಂದೆ ಭೀಮರಾವ್ ವಾಷ್ಠರ್ ರವರು ದಾವಲಮಲಿಕ್ ಮುತ್ಯಾನ ಕುರಿತ 14 ಹಾಡುಗಳಿಗೆ ಸಾಹಿತ್ಯ ಬರೆದು ಬಿಡುಗಡೆ ಮಾಡಿದ್ದರು . 15 ನೇ ಭಕ್ತಿಗೀತೆಯನ್ನು ಸುಕ್ಷೇತ್ರದಲ್ಲಿಯೇ ಭಕ್ತರ ಸಮಕ್ಷಮದಲ್ಲಿಯೇ ಬಿಡುಗಡೆ ಮಾಡಲಾಯಿತು .

LEAVE A REPLY

Please enter your comment!
Please enter your name here