ನ.ಪಂ. ಸಭೆಗೆ ಬಾರದ ಸಚಿವರು ; ಪ್ರತಿಭಟನೆ ಮುಂದುವರಿಸಿದ ವಿಪಕ್ಷ

0

 

ಮುಂದಿನ ಸಾಮಾನ್ಯ ಸಭೆಗೂ ಮೊದಲು ಸಚಿವರಿದ್ದು ವಿಶೇಷ ಸಭೆ ಅಧ್ಯಕ್ಷರ ವಿಶ್ವಾಸ

ಸಚಿವ ಎಸ್.ಅಂಗಾರರು ನ.ಪಂ. ಸಾಮಾನ್ಯ ಸಭೆಗೆ ಬರಬೇಕೆಂಬ ವಿಪಕ್ಷ ಸದಸ್ಯರ ಒತ್ತಾಯ ಈ ಬಾರಿಯ ನ.ಪಂ. ಸಾಮಾನ್ಯ ಸಭೆಯಲ್ಲಿಯೂ ಮುಂದುವರಿದ ಹಾಗೂ ಮುಂದಿನ ಸಾಮಾನ್ಯ ಸಭೆಗೂ ಮೊದಲು ಸಚಿವರಿದ್ದು ವಿಶೇಷ ಸಭೆ ಆಯೋಜಿಸುವುದಾಗಿ ಅಧ್ಯಕ್ಷರು ವಿಪಕ್ಷ ಸದಸ್ಯರಿಗೆ ಭರವಸೆ ನೀಡಿದ ಪ್ರಸಂಗ ಸುಳ್ಯ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತ, ಎಂ.ವೆಂಕಪ್ಪ ಗೌಡ, ಉಮ್ಮರ್ ಕೆ.ಎಸ್., ರಿಯಾಜ್ ಕಟ್ಟೆಕಾರ್, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಪ್ರವಿತಾ ಪ್ರಶಾಂತ್, ಪೂಜಿತಾ ಕೆ.ಯು., ವಾಣಿಶ್ರೀ ಬೊಳಿಯಮಜಲು, ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ ದುಗಲಡ್ಕ, ಬುದ್ಧ ನಾಯ್ಕ ಜಿ, ನಾಮ ನಿರ್ದೇಶಿತ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ, ಯತೀಶ್ ಬೀರಮಂಗಲ ಇದ್ದರು.


ಸಭೆಗೆ ವಿಪಕ್ಷ ಸದಸ್ಯ ಕೆ.ಎಸ್. ಉಮ್ಮರ್ ಗುಲಾಬಿ ಹೂ ಹಾಗೂ ಕಪ್ಪು ಪಟ್ಟಿಯೊಂದಿಗೆ ಆಗಮಿಸಿದರು. ಸಭೆ ಆರಂಭಗುತ್ತಿದ್ದಂತೆ ಮಾತನಾಡಿದ ಉಮ್ಮರ್‌ರವರು, ಅಧ್ಯಕ್ಷರೇ ಸಭೆಗೆ ಸಚಿವರು ಬರಬೇಕೆಂದು ನಮ್ಮ ಬೇಡಿಕೆ ಇಟ್ಟಿzವೆ. ಅವರು ಬರುತ್ತಾರಾ?” ಎಂದು ಕೇಳಿದರು. ಅಧ್ಯಕ್ಷರು ಇವತ್ತು ಬರುವುದಿಲ್ಲ. ಬೇರೆ ಕಾರ್ಯಕ್ರಮವಿದೆ ಎಂದು ಹೇಳಿದಾಗ, `’ಅಧ್ಯಕ್ಷರೇ ಸಚಿವರು ಬರಬೇಕು. ನಗರದಲ್ಲಿ ಆಶ್ರಯ ಯೋಜನೆಯ ಸೈಟ್ ಹಂಚಿಕೆ, ನಗರಕ್ಕೆ ವಿಶೇಷ ಅನುದಾನ ಸಹಿತ ಹಲವು ವಿಚಾರಗಳ ಕುರಿತು ಅವರಲ್ಲಿ ಮನವಿ ಮಾಡಲಿzವೆ’ ಎಂದು ಹೇಳಿದಾಗ, ಅವರ ಮಾತಿಗೆ ಧ್ವನಿಗೂಡಿಸಿದ ಎಂ.ವೆಂಕಪ್ಪ ಗೌಡರು, “ನಿನ್ನೆ ಸಚಿವರು ಸುಳ್ಯದಲ್ಲಿದ್ದರು. ಇವತ್ತು ಅವರು ಇರುತ್ತಾರೆ. ನಮ್ಮ ಕೋರಿಯಂತೆ ಅವರು ಸಭೆಗೆ ಬರಬಹುದಿತ್ತು. ಉzಶ ಪೂರ್ವಕವಾಗಿಯೇ ಅವರು ಬರುತ್ತಿಲ್ಲ. ಇದನ್ನು ನೋಡುವಾಗ ಸುಳ್ಯದ ಅಭಿವೃದ್ಧಿ ಆಗದೇ ಇರುವುದರಿಂದ ಹೇಡಿತನದಿಂತ ಬರ್‍ತಾ ಇಲ್ಲ ಎಂದು ನಮಗೆ ಅನಿಸುತ್ತಿದೆ” ಎಂದು ಹೇಳಿದಾಗ, ಅಧ್ಯಕ್ಷ ವಿನಯ ಕಂದಡ್ಕರು, “ಸದಸ್ಯರೇ ಅಭಿವೃದ್ಧಿ ಕುರಿತು ನಿಮ್ಮ ಕಾಳಜಿ ಒಳ್ಳೆಯದೇ. ಸುಳ್ಯ ನಗರದಲ್ಲಿ ೧೫ನೇ ಹಣಕಾಸು ಯೋಜನೆ, ವರ್ಗ ೧ ಹಾಗೂ ನಗರೋತ್ಥಾನದಲ್ಲಿ ಆಗಿರುವ ಅಭಿವೃದ್ಧಿ ಕುರಿತು ವಿವರ ನೀಡಿದರಲ್ಲದೆ, ಮುಂದಿನ ಸಾಮಾನ್ಯ ಸಭೆಗೂ ಮೊದಲು ಸಚಿವ ಅಂಗಾರರು ಹಾಗೂ ಕೋಟಾ ಶ್ರೀನಿವಾಸ ಪೂಜಾರಿಯವರಿದ್ದು ವೀಶೇಷ ಸಭೆ ಮಾಡೋಣ” ಎಂದು ಭರವಸೆ ನೀಡಿದರು. “ ಸಚಿವರು ಬರುತ್ತಾರೆಂದು ನಾನು ಗುಲಾಬಿ ಹೂ ತಂದಿದ್ದೆ. ಅವರನ್ನು ಸ್ವಾಗತಿಸಲು. ಆದರೆ ಅವರು ಬರಲಿಲ್ಲವಾದ್ದರಿಂದ ಕಪ್ಪು ಪಟ್ಟಿ ಧರಿಸುತೇನೆ. ಅವರು ಸಭೆಗೆ ಬರುವ ತನಕ ನನ್ನ ಪ್ರತಿಭಟನೆ ಮುಂದುವರಿಯಲಿದೆ” ಎಂದು ಉಮ್ಮರ್ ಹೇಳಿದಾಗ, ವಿಪಕ್ಷ ಸದಸ್ಯರು ಕೂಡಾ ಅವರಿಗೆ ಬೆಂಬಲವಾಗಿ ನಿಂತು ತಾವೂ ಕೂಡಾ ಕಪ್ಪು ಪಟ್ಟಿ ಧರಿಸಿದರು. ಸದಸ್ಯ ಬೂಡು ರಾಧಾಕೃಷ್ಣ ರೈಯವರು, “ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಆಗಬೇಕಾದುದೇ. ಆದರೆ ವೆಂಕಪ್ಪ ಗೌಡರೇ ನೀವು ಹೇಡಿತನದ ಮಾತನ್ನು ಆಡಬಾರದು” ಎಂದು ಹೇಳಿದರು.


ಸಭೆಯಲ್ಲಿ ಮಾಸದಂಗಡಿ ಏಲಂ, ಬ್ಯಾನರ್ ಗೆ ಶುಲ್ಕ ವಿಧಿಸುವ ಕಲ್ಚೆರ್ಪೆ ಬರ್ನಿಂಗ್ ಮೆಷಿನ್ ವಿಚಾರ, ಕೊಳವೆ ಬಾವಿ ಕೊರೆಯಲು ಎನ್‌ಒಸಿ ನೀಡುವ ವಿಚಾರ ಇತ್ಯಾದಿಗಳ ಮೇಲೆ ಚರ್ಚೆಗಳು ನಡೆದವು.

LEAVE A REPLY

Please enter your comment!
Please enter your name here