ಆಲೆಟ್ಟಿ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಪ್ರಾಯೋಜಕತ್ವದ ಸ್ಥಬ್ಧ ಚಿತ್ರದ ಟ್ಯಾಬ್ಲೋ ಗೆ ಚಾಲನೆ

0

 

ಆಲೆಟ್ಟಿ ಶ್ರೀ ಸದಾಶಿವ ದೇವರ ಸಾನಿಧ್ಯದಿಂದ ಸುಳ್ಯ ದಸರಾ ಶೋಭಾಯಾತ್ರೆಯ ಸಂದರ್ಭದಲ್ಲಿ ಹೊರಟ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಆಯೋಜನೆಯ ಪ್ರಥಮ ವರ್ಷದ ಕಲಾ ಕಾಣಿಕೆ ಸ್ಥಬ್ಧ ಚಿತ್ರದ ಟ್ಯಾಬ್ಲೋ ಗೆ ಆಲೆಟ್ಟಿ ಯಲ್ಲಿ ಚಾಲನೆ ನೀಡಲಾಯಿತು.


ವ್ಯ ‌ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಸದಸ್ಯೆ ವೀಣಾ ವಸಂತ ಆಲೆಟ್ಟಿ, ಸೊಸೈಟಿ ನಿರ್ದೇಶಕ ಸುಧಾಕರ ಆಲೆಟ್ಟಿ, ನಿವೃತ್ತ ಸಿ.ಇ.ಒ ಸುಧಾಮ‌ ಆಲೆಟ್ಟಿ, ಭ.ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಪವಿತ್ರನ್ ಗುಂಡ್ಯ, ನಾರಾಯಣ ರೈ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು. ಜನನಿ ಕ್ಲಬ್ ಅಧ್ಯಕ್ಷ ಭಜರಂಗದಳ ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು. ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here