ಅಡ್ಯಡ್ಕ : ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

0

 

ತೊಡಿಕಾನ ಗ್ರಾಮದ ಅಡ್ಯಡ್ಕ ಚಾಂಚಾಡು ಎಂಬಲ್ಲಿನ ವಿಮಲ ಯಾನೆ ಗುಬ್ಬಿ  ಎಂಬವರು ಸುಮಾರು 10 ದಿನಗಳ ಹಿಂದೆ ಮೃತಪಟ್ಟಿದ್ದು, ಅ. 1೦ರಂದು ಘಟನೆ ವರದಿಗೆ ಬಂದಿದೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪುತ್ರನನ್ನು ಅಗಲಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಅವರು ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ. ಮೃತದೇಹವು ದುರ್ವಾಸನೆ ಬೀರುತ್ತಿದ್ದು, ಅದನ್ನು ಗಮನಿಸಿದ ಊರವರು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಂಪಾಜೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರ ಗಮನಕ್ಕೆ ತಂದರು. ಸ್ಪಂದಿಸಿದ ವಿಪತ್ತು ನಿರ್ವಹಣಾ ಘಟಕದವರು ಸುಳ್ಯ ಸ್ಮಶಾನಕ್ಕೆ ಶವವನ್ನು ತಂದು ದಹನ ಕಾರ್ಯ ಮಾಡಿದರು. 

 

LEAVE A REPLY

Please enter your comment!
Please enter your name here