ಬಾಳಿಲ ಗ್ರಾಮ ಪಂಚಾಯತ್ ನ ಸುಂದರ ಎಂ.ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ಆಲೆಟ್ಟಿ ಪಂಚಾಯತ್ ಗೆ ನೇಮಕ

0

 

ಬಾಳಿಲ ಗ್ರಾಮ ಪಂಚಾಯತ್ ನಲ್ಲಿ 22 ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದ ಸುಂದರ ಎಂ.ರವರಿಗೆ ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ನೇಮಕವಾಗಿದ್ದು ಇವರನ್ನು ಆಲೆಟ್ಟಿ ಪಂಚಾಯತ್ ಗೆ ನೇಮಿಸಲಾಗಿದೆ.


ಬಿಲ್ ಕಲೆಕ್ಟರ್ ಆಗಿ ಬಾಳಿಲ ಪಂಚಾಯತ್ ಗೆ ಸೇರಿದ ಇವರು ಹಲವು ವರ್ಷಗಳ ಕಾಲ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಿನಿಯಾರಿಟಿ ಆಧಾರದಲ್ಲಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಗ್ರಾ.ಪಂ.ಗಳ ಸಿಬ್ಬಂದಿಯನ್ನು ರಾಜ್ಯ ಸರ್ಕಾರದ ನೌಕರರಾಗಿ ನೇಮಕ ಮಾಡುವ ವ್ಯವಸ್ಥೆಯಿದ್ದು ಅದರಂತೆ ಈ ನೇಮಕ ನಡೆದಿದೆ.
ಸುಂದರರವರು ಮುಪ್ಪೇರ್ಯದವರಾಗಿದ್ದು ದೆಯ್ಯು ಮತ್ತು ಅಂಗಾರೆ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here