ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ನಿರ್ಮಿಸಲ್ಪಟ್ಟಿರುವ ಹಿರಿಯ ಸಾಹಿತಿ ಭಾಷಾ ವಿದ್ವಾಂಸ ಡಾ। ಕೋಡಿ ಕುಶಾಲಪ್ಪ ಗೌಡರ ಬಗೆಗಿನ *” ಶತಮಾನದ ಭಾಷಾವಿದ್ವಾಂಸ ಡಾ। ಕೋಡಿ ಕುಶಾಲಪ್ಪ ಗೌಡ “* ಸಾಕ್ಷ್ಯ ಚಿತ್ರದ ಬಿಡುಗಡೆ ಕಾರ್ಯಕ್ರಮ ನಿನ್ನೆ ಸಂಜೆ ಸುಳ್ಯದ ರಂಗಮನೆಯಲ್ಲಿ ನಡೆಯಿತು.
ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ। ಹರಿಕೃಷ್ಣ ಭಟ್ ಭರಣ್ಯ ಅವರು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು.
ಸಾಕ್ಷ್ಯ ಚಿತ್ರದ ನಿರ್ದೇಶಕರಾದ ರಂಗಕರ್ಮಿ ಜೀವನ್ ರಾಂ ಸುಳ್ಯ ಹಾಗೂ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮುಖ್ಯ ಅತಿಥಿಗಳಾಗಿದ್ದರು.
ಅರೆಭಾಷೆ ಅಕಾಡೆಮಿ ಸದಸ್ಯ ಕಿರ್ಲಾಯ ಪುರುಷೋತ್ತಮರು ಸ್ವಾಗತಿಸಿದರು. ಸಾಕ್ಷ್ಯಚಿತ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು . ಡಾ। ಕೋಡಿ ಕುಶಾಲಪ್ಪ ಗೌಡರ ಪುತ್ರಿ ಡಾ। ಮಾಲಿನಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಅಕಾಡೆಮಿ ಸದಸ್ಯ ಉದಯ ಕುಂಬಳಚೇರಿ ವಂದಿಸಿದರು. ಅಕಾಡೆಮಿ ಸದಸ್ಯರುಗಳಾದ ಡಾ। ವಿಶ್ವನಾಥ ಬದಿಕಾನ, ಎಂ.ಎಸ್.ಜಯಪ್ರಕಾಶ್, ಡಾ। ಪುರುಷೋತ್ತಮ ಕರಂಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.