ಎಡಮಂಗಲ ಗ್ರಾ.ಪಂ. ಸಿಬ್ಬಂದಿ ಗೋಪಿನಾಥ್ ಡಿ ಕಾರ್ಯದರ್ಶಿಯಾಗಿ ಭಡ್ತಿ

0

 

 

ಎಡಮಂಗಲ ಗ್ತಾ.ಪಂ. ನಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಿನಾಥ್ ಡಿ ಯವರು ಕಾರ್ಯದರ್ಶಿಯಾಗಿ ಭಡ್ತಿ ಹೊಂದಿ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ.ಗೆ ನಿಯೋಜನೆಗೊಂಡಿದ್ದಾರೆ.
ಎಡಮಂಗಲ ಗ್ರಾಮದ ದಡ್ಡುಮನೆ ಶಿವಪ್ಪ ನಾಯ್ಕ ಮತ್ತು ನೀಲಮ್ಮ ದಂಪತಿಯ ಪುತ್ರರಾದ ಇವರು ಸುಮಾರು 25 ವರ್ಷಗಳಿಂದ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಶ್ರೀಮತಿ ಸಂಧ್ಯಾ ಗೋಪಿನಾಥ್ ಎಂ.ಎ. ಬಿ.ಎಡ್. ಪದವೀಧರರಾಗಿದ್ದು, ಬೆಳ್ತಂಗಡಿ ತಾಲೂಕಿನ ಉಜಿರೆಯ ಮುಂಡಾಜೆ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಗೃಹಿಣಿಯಾಗಿದ್ದಾರೆ. ಪುತ್ರಿ ಸಾನ್ವಿ ಡಿ ಕಡಬದ ಸೈಂಟ್ ಎನ್ಸ್ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿಯಾಗಿದ್ದಾರೆ.

LEAVE A REPLY

Please enter your comment!
Please enter your name here