ಅ.15ರಂದು ಮಂಡೆಕೋಲು‌ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಂದ ಅಹವಾಲು ಸ್ವೀಕಾರ

0

 

ಅ.14ರಂದು ಡಿಸಿ ಆಗಮನ : ಗ್ರಾಮದಲ್ಲಿ ವಾಸ್ತವ್ಯ – ಚಾವಡಿ ಕಾರ್ಯಕ್ರಮ ಆಯೋಜನೆ

 

ಅ.15 ರಂದು‌ ಮಂಡೆಕೋಲು ಗ್ರಾಮದಲ್ಲಿ‌ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅ.14 ರಂದು‌ ಸಂಜೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ‌ಕೆ.ವಿ.ಯವರು ಮಂಡೆಕೋಲಿಗೆ ಆಗಮಿಸಲಿದ್ದಾರೆ.

ಅ.14ರಂದು ಸಂಜೆ ಬರುವ ದಾರಿಮಧ್ಯೆ ಮುರೂರು ಚೆಕ್ ಪೋಸ್ಟ್ ಭೇಟಿ ನೀಡಲಿದ್ದಾರೆ.
ಸಂಜೆ 6.00ಗಂಟೆಗೆ ಮಂಡೆಕೋಲುಗೆ ಆಗಮಿಸುವರು.‌

ಸಂಜೆ 6.30ಗೆ ಪುತ್ಯ ಶಾಲೆಗೆ ಭೇಟಿ‌ ನೀಡುವರು.
ಅಲ್ಲಿ ಗ್ರಾಮ ಚಾವಡಿ ಕಾರ್ಯಕ್ರಮ ಹಾಗೂ ಮುಕ್ತ ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.

ಅ.15 ರಂದು ಬೆಳಗ್ಗೆ8.00ಗಂಟೆಗೆ ಪೇರಾಲು -ಉದ್ದಂತಡ್ಕ ಶಾಲೆ ಭೇಟಿ, 8.30 ಕ್ಕೆ ಪೇರಾಲು ಸಂಜೀವಿನಿ ಕಟ್ಟಡದ ಗುದ್ದಲಿ ಪೂಜೆ, ಅಡ್ಡಂತಡ್ಕ ದೇರಣ್ಣ ಗೌಡರಿಂದ.
9.00ಗಂಟೆಗೆ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಶಾಲೆ ಭೇಟಿ. 9.30 ಕ್ಕೆ ಗ್ರಾಮ ಪಂಚಾಯತ್ ಗ್ರಂಥಾಲಯ ಕಟ್ಟಡದ ಗುದ್ದಲಿ ಪೂಜೆ. ಅಮ್ಮನಿಗೊಂದು ಪುಸ್ತಕ ಕಾರ್ಯಕ್ರಮ.
ಬೆಳಿಗ್ಗೆ ಗಂಟೆ 10.00 ಗಂಟೆಯಿಂದ ಅಪರಾಹ್ನ 2.00 ಗಂಟೆಯವರೆಗೆ ಸೊಸೈಟಿ ಯಲ್ಲಿ ಅಹವಾಲು ಸ್ವೀಕಾರ ನಡೆಯುವುದು.

LEAVE A REPLY

Please enter your comment!
Please enter your name here