ಕಲ್ಮಡ್ಕ: ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ ನಿಂತಿಕಲ್ಲು ವಲಯದ ಕಲ್ಮಡ್ಕ ಒಕ್ಕೂಟಕ್ಕೆ ಸಂಬಂಧಪಟ್ಟಂತೆ ಅ. 13ರಂದು ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು. ಗ್ರಾಮದ ಹಿರಿಯರಾದ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯದ ಮೇಲ್ವಿಚಾರಕರಾದ ಉಷಾ ಕಲ್ಯಾಣಿ ಸಿ.ಎಸ್.ಸಿ. ಕೇಂದ್ರದಲ್ಲಿ ಯಾವ ರೀತಿಯ ಸದುಪಾಯೋಗಳು ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರದ ನೋಡೆಲ್ ಅಧಿಕಾರಿ ಪ್ರಶಾಂತ್, ನಗದು ಸಹಾಯಕರಾದ ಪುಷ್ಪ, ಒಕ್ಕೂಟದ ಅಧ್ಯಕ್ಷರಾದ ರಮೇಶ್ ಉಪಾಧ್ಯಕ್ಷ ರಾದ ಲತೇಶ್, ಸಂಘದ ಸದಸ್ಯರಾದ ಪದ್ಮನಾಭ, ಹೊನ್ನಪ್ಪ, ಜಯಂತ, ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರಾದ ಜಯಪ್ರಕಾಶ್, ಸುವಿದಾ, ಸಹಾಯಕಿ ಅನುರಾಧ ಮತ್ತು ವಿ.ಎಲ್.ಇ. ಭವ್ಯ ಉಪಸ್ಥಿತರಿದ್ದರು.
ಉದ್ಘಾಟನೆ ಸೇವಾ ಪ್ರತಿನಿಧಿ ರತ್ನಾವತಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here