ಸುಳ್ಯದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು. ವಿಜ್ಞಾನ ಶಿಕ್ಷಕಿ ಶ್ರೀಮತಿ ಸವಿತ ಕುತ್ತಿಮುಂಡರವರು ದಿನಾಚರಣೆಯ ಮಹತ್ವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರೌಢಶಾಲಾ ವಿದ್ಯಾರ್ಥಿನಿಯರಾದ ತನ್ವಿ ಕೆ. ಎಸ್. ತಶ್ವಿ ಪಿ. ರೈ. ಸಾನ್ವಿ ಪಿ. ಎನ್. ಸಮೀಕ್ಷಾ ಗಣೇಶ್, ಇಶಾ ಯು. ಎಂ. ಬಿಂದು ಕೆ. ಜೆ. ಕೈ ತೊಳೆಯುವ ವಿಧಾನಗಳನ್ನು ಪ್ರಾತ್ಯಕ್ಷಿತೆಯನ್ನು ನೃತ್ಯದ ಮೂಲಕ ತೋರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿ. ಬಿನೋಮ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.