ಅಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಅಂಗವಿಕಲ ಶಿವರಾಮ ಕೂಳಿಯಡ್ಕರವರಿಗೆ ಮಂಚ ವಿತರಣೆ

0

 

ಅಲೆಟ್ಟಿ ಗ್ರಾಮ ಪಂಚಾಯತ್ 2 ನೇ ವಾರ್ಡಿನ ಶಿವರಾಮ ಕೂಳಿಯಡ್ಕ ಎಂಬವರು ಅಂಗವಿಕಲರಾಗಿದ್ದು ವಾರ್ಡಿನ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ಕುಸುಮಾ ರವರಮುತುವರ್ಜಿಯಿಂದ ಅಂಗವಿಕಲರ ಅನುದಾನದಲ್ಲಿ ಮಂಚವನ್ನು ವಿತರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ಫಲಾನುಭವಿಗೆ ಮಂಚವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ಕುಸುಮ ಬಿಲ್ಲರಮಜಲು, ಪಿ.ಡಿ.ಒ ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ, ಸಿಬ್ಬಂದಿಗಳಾದ ಸೀತಾರಾಮ, ರವಿ, ನೇತ್ರಾವತಿ ಆಲೆಟ್ಟಿ, ಪ್ರಶಾಂತ್ ಕುಡೆಕಲ್ಲು, ಕೃತಿ ಕೂಳಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here