ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಆಶ್ರಯ ದಲ್ಲಿ ವಿಶೇಷ ಸಭೆಯು ಅಕ್ಟೋಬರ್ 16 ರಂದು ಅರಂತೋಡಿನ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀಜಿತ್ ಎ. ಜಿ ಯವರ ಅಧ್ಯಕ್ಷ ತೆ ಯಲ್ಲಿ ನಡೆಯಿತು.
ಸಭೆ ಯಲ್ಲಿ ಕುಂಬಳ ಚೇರಿ ವಯನಾಟ್ ಕುಲವನ್ ದೈವಸ್ಥಾನ ದಲ್ಲಿ ನಡೆಯಲಿರುವ ದೈವಕಟ್ಟು ಮಹೋತ್ಸವ ದ ಬಗ್ಗೆ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ಸಮಿತಿ ಯ ವ್ಯಾಪ್ತಿ ಯ ಅರಂತೋಡು, ಪೆರಾಜೆ, ತೊಡಿಕಾನದ ಪ್ರತಿ ಸದಸ್ಯರ ಮನೆಗಳಲ್ಲಿ ಮಾಸಿಕ ಸಭೆಗಳನ್ನು ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರು ಗಳಾದ ಗೋಪಾಲ ಎ.ಎಂ, ಶಿವರಾಮ, ಕೋಶಾಧಿಕಾರಿ ಪ್ರದೀಪ್. ಕೆ ಉಪಾಧ್ಯಕ್ಷರಾದ ಬಿನು ಪೆರಾಜೆ, ಸದಸ್ಯರಾದ ಕುಂಞಕಣ್ಣ ಪೆರಾಜೆ, ಗಣೇಶ್ ಬಿ. ಕೆ, ಬಾಲಕೃಷ್ಣ ಅಂಗಡಿಮಜಲು ಸತೀಶ್ ತೊಡಿಕಾನ, ಪುರುಷೋತ್ತಮಕೊಡಂಕೇರಿ ,ಚೇತನ್ ಎಲ್ಪಕಜೆ,ಕರುಣಾಕರ ಕಡೆಪಾಲ, ಸುಕುಮಾರ ಚಾ0ಬಾಡು,ಕೃಷ್ಣ ಪೆರಾಜೆ, ಸುಪ್ರೀತ್ ಚಾ0ಬಾಡು, ಪದ್ಮ ನಾಭ ಅಂಗಡಿಮಜಲು, ಅಮ್ಮಣಿ ಚಿಟ್ಟನೂರು, ರಾಧಾ ಚಾಂಬಾಡು, ಜನಾರ್ಧನ ಬಂಡಡ್ಕ, ಮಿಥುನ್ ಎಲ್ಪಕಜೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.