ಕಲ್ಮಡ್ಕ ಅಂಗನವಾಡಿ ಕೇಂದ್ರದಲ್ಲಿ ಕಿಶೋರಿಯರಿಗೆ ಮಾಹಿತಿ ಮತ್ತು ಕೈ ತೊಳೆಯುವ ವಿಧಾನ ಬಗ್ಗೆ ಮಾಹಿತಿ ಕಾರ್ಯಕ್ರಮ ಅ. 17ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಶ್ವಿನಿ ಸಮುದಾಯ ಅರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ, ಪಂಜ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಪವಿತ್ರ ಜೆ, ಪಂಜ ವಲಯದ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ ಭಾಗವಹಿಸಿದ್ದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ತಾರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ತ್ರೀ ಶಕ್ತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ರಕ್ಷಾ ಪ್ರಾರ್ಥಸಿದರು. ಗುಂಪಿನ ಸದಸ್ಯೆ ಪೂವಕ್ಕ ಸ್ವಾಗತಿಸಿ, ಲತಾ ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು. ಕಿಶೋರಿಯರು ಗುಂಪಿನ ಸದಸ್ಯರು, ಪೋಷಕರು, ಕಲ್ಮಡ್ಕ ಮತ್ತು ಇಂದ್ರಾಜೆ ಅಂಗನವಾಡಿ ಶಿಕ್ಷಕಿಯರು ಮತ್ತು ಕಲ್ಮಡ್ಕ ಅಂಗನವಾಡಿ ಸಹಾಯಕಿ ಪೂರ್ಣಿಮ ಸಹಕರಿಸಿದರು.