ಜೆಡಿಎಸ್ ಯುವ ಜನತಾದಳದ ಮುಖಂಡರ ಸಭೆ

0

 

ಜೆಡಿಎಸ್ ಯುವ ಜಾತ್ಯತೀತ ಜನತಾದಳ ಸುಳ್ಯ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ಅ.16ರಂದು ಸುಳ್ಯದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ರವರ ನಿರ್ದೇಶನದಂತೆ ತಾಲೂಕು ಯುವ ಅಧ್ಯಕ್ಷ ಮೋಹನ್ ಕೊಲ್ಲಮೊಗ್ರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಪಕ್ಷ ಸಂಘಟನೆಯ ರೀತಿ, ಯುವಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು,ಪಕ್ಷ ಸಂಘಟನೆಯಲ್ಲಿ ಯುವಕರ ಪಾತ್ರ ಏನು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಮತ್ತು ಯುವ ಸಮುದಾಯದ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷದತ್ತ ಆಕರ್ಷಿಸಿ ಸದಸ್ಯತ್ವ ಅಭಿಯಾನದ ಮುಖಾಂತರ ಪಕ್ಷ ಸಂಘಟನೆಯನ್ನು ಇನ್ನಷ್ಟು ತಾಲೂಕು ಹಾಗು ಗ್ರಾಮ ವ್ಯಾಪ್ತಿ ಪಧಾದಿಕಾರಿಗಳನ್ನು ಚುರುಕುಗೊಳಿಸುವುದರೊಂದಿಗೆ ಮುಂದಿನ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ಸರಕಾರ ರಚನೆಯಲ್ಲಿ ಯುವಕರು ಮುಖ್ಯ ಪಾತ್ರವಹಿಸಬೇಕು ಎಂದು ಯುವಕರನ್ನು ಪ್ರೋತ್ಸಾಹಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್ ಕರ್ಕೇರ ಹನೀಫ಼್ ಮೊಟ್ಟೆಂಗಾರ್, ಪದ್ಮನಾಭ ಪರ್ಲಡ್ಕ ,ಸತೀಶ್ ಕಾಂತಮಂಗಲ, ಸುನಿಲ್ ಕಾಂತಮಂಗಲ, ಶಶಿದರ, ದಯಾನಂದ, ಪ್ರತೀಕ್ ದೇರಪ್ಪಜ್ಜನಮನೆ, ಜಗದೀಶ್ ಸುಳ್ಯ, ನಿತೀಶ್, ವಿನಿತ್, ನಿಶಾಂತ್, ಜೈದೀಪ್ ಮೊದಲಾದವರು ಭಾಗವಹಿಸಿದ್ದರು.
ಯುವ ತಾಲೂಕು ಅಧ್ಯಕ್ಷ ಮೋಹನ್ ಕೊಲ್ಲಮೊಗ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತಾನಾಡಿದರು.
ಜಿಲ್ಲಾ ಯುವ ಮಹಾಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು ವಂದಿಸಿದರು.

LEAVE A REPLY

Please enter your comment!
Please enter your name here