ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮನೀಶ್ ಕಾಳಪ್ಪಜ್ಜನ ಮನೆ ಪ್ರಥಮ

0

ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಫ್ 2022, ಕೊಡಗು ಕಪ್ 2022, ಕಲಾಭೂಮಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕುಶಾಲನಗರ ಮತ್ತು ಕ್ರೀಡಾ ಭಾರತಿ ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ಕುಶಾಲನಗರದ ರೈತ ಭವನದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಕಟ ಮತ್ತು ಕುಮಿಟೆ ವಿಭಾಗದಲ್ಲಿ ಮನೀಶ್ ಡಿ.ಕೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಕರಾಟೆ ಗುರುಗಳಾದ ಚಂದ್ರಶೇಖರ ಕುದ್ಕುಳಿಯವರ ಶಿಷ್ಯರಾದ ಇವರು ಕನಕಮಜಲು ಗ್ರಾ.ಪಂ. ಮಾಜಿ ಸದಸ್ಯ ದಿವಾಕರ ಕಾಳಪ್ಪಜ್ಜನ ಮನೆ ಮತ್ತು ಅಜ್ಜಾವರ ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ರೇವತಿ ಪಲ್ಲತಡ್ಕರವರ ಪುತ್ರ. ಸೋಣಂಗೇರಿ ಸ.ಉ.ಹಿ.ಪ್ರಾ ಶಾಲೆಯ 4ನೇ ತರಗತಿ ವಿದ್ಯಾರ್ಥಿ.