ಅಗಲಿದ ನಿವೃತ್ತ ಮುಖ್ಯ ಶಿಕ್ಷಕ ವಾಸಪ್ಪ ಗೌಡ ಕುದ್ಕುಳಿ ಯವರಿಗೆ ಸಾರ್ವಜನಿಕ ನುಡಿನಮನ

0

 

 

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಕುದ್ಕುಳಿ ಕುಟುಂಬದ ಹಿರಿಯರು ನಿವೃತ್ತ ಮುಖ್ಯ ಶಿಕ್ಷಕ ವಾಸಪ್ಪ ಮಾಸ್ತರ್ ಕುದ್ಕುಳಿಯವರು ಅ. 3 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ಅ.19 ರಂದು ಮೃತರ ಸ್ವಗೃಹ ಬಡ್ಡಡ್ಕದಲ್ಲಿ ನಡೆಯಿತು.

ಬಡ್ಡಡ್ಕಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪಕರಾಗಿದ್ದ ಬಡ್ಡಡ್ಕ ಕುಡೆಕಲ್ಲು ಅಪ್ಪಯ್ಯ ಗೌಡರೊಂದಿಗೆ ಶಾಲೆಗೆ ಆರಂಭಿಕ ಬುನಾದಿ ಹಾಕುವಲ್ಲಿ ಶ್ರಮಿಸಿ ಈ ಶಾಲೆಯಲ್ಲಿ ಸ್ಥಾಪಕ ಮುಖ್ಯ ಗುರುಗಳಾಗಿ 1954-1983ರ ತನಕ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಮೃತರ ಜೀವನಗಾಥೆಯ ಕುರಿತು ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಡಾ. ಎನ್.ಎ.ಜ್ಞಾನೇಶ್ , ಶಾಲೆಯ ಗೌರವಾಧ್ಯಕ್ಷೆ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ, ಮೈಸೂರು ಮಹಾಜನ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಿಮ್ಮೇಗೌಡ, ಮೃತರ ಸಹೋದರ ಕುದ್ಕುಳಿ ಮುಕುಂದ ಗೌಡ ಪೆರಾಜೆ ಯವರು ನುಡಿನಮನ ಸಲ್ಲಿಸಿದರು.


ಮೃತರ ಕಿರಿಯ ಸಹೋದರ ಬಾಲಚಂದ್ರ ಕುದ್ಕುಳಿ
ಮೃತರ ಪತ್ನಿ ಶ್ರೀಮತಿ ಪಾರ್ವತಿ, ಪುತ್ರರಾದ ಮೈಸೂರಿನ ಮಹಾಜನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಕೆ.ವಿ., ಉದ್ಯಮಿ, ಕೆ.ವಿ ಟ್ರೇಡರ್ಸ್ ನ ಮಾಲಕ ಪ್ರಕಾಶ್ ಕೆ.ವಿ., ಪುತ್ರಿ ಶ್ರೀಮತಿ ಪ್ರೇಮ, ಅಳಿಯ ಶೇಷಪ್ಪ ಮಾಸ್ತರ್ ಕಳಗಿ, ಸೊಸೆಯಂದಿರಾದ ಅಪರ್ಣ ಪ್ರಭಾಕರ್, ಶುಭ ಪ್ರಕಾಶ್ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು, ಸಹೋದರರು ,ಸಹೋದರಿಯರು, ಮೊಮ್ಮಕ್ಕಳು ಉಪಸ್ಥಿತರಿದ್ದರು.ಮೃತರ ನಿಕಟ ಬಂಧು ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರ್ವಹಿಸಿದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು, ಶಿಷ್ಯ ವರ್ಗದವರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.

 

LEAVE A REPLY

Please enter your comment!
Please enter your name here