ಕೇನ್ಯ: ನೇಲ್ಯಡ್ಕದಲ್ಲಿ ಈಗಲ್ ಅಟ್ಯಾಕರ್ಸ್ ರವರಿಂದ‌ ಕಬಡ್ಡಿ ಪಂದ್ಯಾಟ

0

 

 

ಕೇನ್ಯದ ನೇಲ್ಯಡ್ಕದಲ್ಲಿ ಈಗಲ್ ಅಟ್ಯಾಕರ್ಸ್ ರವರಿಂದ ಅ. 16ರಂದು ನೇಲ್ಯಡ್ಕ ಶ್ರೀ ಆದಿ ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ಮತ್ತು ಕೊರಗಜ್ಜ ದೈವದ ಸಾನಿಧ್ಯದ ಜೀರ್ಣೋದ್ದಾರ ಪ್ರಯುಕ್ತ 55 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವು ನೇಲ್ಯಡ್ಕ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ನೇಲ್ಯಡ್ಕ ಶಾಲಾ ಮುಖ್ಯ ಗುರುಗಳಾದ ಪುರುಷೋತ್ತಮ್ ಬಿ ವಹಿಸಿದ್ದರು. ಮೈದಾನದ ಉದ್ಘಾಟನೆ ಯನ್ನು ಪ್ರಗತಿಪರ ಕೃಷಿಕರು, ಶಿಕ್ಷಣ ತಜ್ಞರು ಆದ ಉದಯ ಅಮ್ಮಣ್ಣಾಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬಳ್ಪ ಗ್ರಾ.ಪಂ. ಸದಸ್ಯ ರಾಜೀವ್ ಕಣ್ಕಲ್, ಸುಬ್ರಹ್ಮಣ್ಯ ಕಣ್ಕಲ್, ಮಿಥುನ್ ಗೌಡ ಕಣ್ಕಲ್ ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಒಟ್ಟು 34 ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನೇಲ್ಯಡ್ಕ ಶಾಲಾ ಎಸ್.ಡಿ ಎಂಸಿ ಅಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳ್ಪ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು, ಗ್ರಾ. ಪಂ. ಸದಸ್ಯರಾದ ಶ್ರೀಮತಿ ಪಾರ್ವತಿ ಪಿ. ಡಿ, ಆಮೇಚೂರ್ ಕಬಡ್ಡಿ ಅಸೋಸಿಯೇಷನ್ ನ ಗೌರವ ಅಧ್ಯಕ್ಷರಾದ ಅಶೋಕ್ ನೆಕ್ರಾಜೆ, ಕಡಬ ತಾಲೂಕು ಯುವಜನ ಒಕ್ಕೂಟದ ನಿರ್ದೇಶಕರಾದ ದೇವಿಪ್ರಸಾದ್ ರೈ ಗೆಜ್ಜೆ, ಹಿಂದೂ ಜಾಗರಣ ವೇದಿಕೆಯ ಪದ್ಮನಾಭ ಗೌಡ ಕಣ್ಕಲ್ ಉಪಸ್ಥಿತರಿದ್ದರು. ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಶಿವದುರ್ಗ ಫ್ರೆಂಡ್ಸ್ ಕೆಂಜಾಳ, ದ್ವಿತೀಯ ಸ್ಥಾನವನ್ನು ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ, ತೃತೀಯ ಸ್ಥಾನವನ್ನು ನವ ಭಾರತ ಅನಂತಾಡಿ, ಚತುರ್ಥ ಸ್ಥಾನವನ್ನು ಮಿತ್ರ ಬಳಗ ದೇವರಗದ್ದೆ ಪಡೆದುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಶ್ರೀಮತಿ ಶಶಿಕಲಾ ಸೂoತಾರು ತಂಡ ಪ್ರಥಮ ಹಾಗೂ ಶ್ರೀಮತಿ ಸವಿತಾ ಮತ್ತು ತಂಡ ದ್ವಿತೀಯ ಸ್ಥಾನ ಪಡೆಯಿತು. ಮುಂಜುನಾಥ್ ಸ್ವಾಗತಿಸಿ ಈಗಲ್ ಅಟ್ಯಾಕರ್ಸ್ ನ ಅಧ್ಯಕ್ಷ ಸುರೇಶ್ ವಂದಿಸಿದರು. ಸಾಗರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here