ದಸರಾ ಯೋಗ 2022

0

ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ದ್ವಿತೀಯ

ದಕ್ಷಿಣ ಕನ್ನಡ ಜಿಲ್ಲಾ ಯೋಗಾಸನ_ ಆವಿಷ್ಕಾರ ಯೋಗ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ರಿ. ದಸರಾ ಯೋಗ 2022 ಪ್ರಯುಕ್ತ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜಾಲ್ಸೂರು ಗ್ರಾಮದ ಸೋನಾ ಅಡ್ಕಾರು ಅವರು ಭಾಗವಹಿಸಿ, 6ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.


ಮಂಗಳೂರಿನ ಪಂಪ್ ವೆಲ್ ನ ಸಾರ್ವಜನಿಕ ಗಣೇಶೋತ್ಸವದ ಷಣ್ಮುಖ ಸಭಾಭವನದಲ್ಲಿ ಅ.16ರಂದು ಜರುಗಿದ ಯೋಗಾಸನ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಅವರು ಭಾಗವಹಿಸಿದ್ದರು.
ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ. ಯೋಗ ಶಿಕ್ಷಕ ಸಂತೋಷ್ ಮುಂಡೋಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಸಂತೋಷ್ ಅವರು ಈಕೆಗೆ ಯೋಗ ತರಬೇತಿ ನೀಡಿದ್ದಾರೆ‌.

LEAVE A REPLY

Please enter your comment!
Please enter your name here