ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ತುಲಾ ಸಂಕ್ರಮಣ ಪೂಜೆ

0

ಪತ್ರಕರ್ತ ಹರೀಶ್ ಬಂಟ್ವಾಳ್ ಸೇರಿದಂತೆ ಹಲವರಿಗೆ ಸನ್ಮಾನ

ತುಲಾ ಸಂಕ್ರಮಣ ಪ್ರಯುಕ್ತ ಅಜ್ಜಾವರದ ಅಡ್ಪಂಗಾಯದಲ್ಲಿರುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮೀ ಸನ್ನಿಧಿಯಲ್ಲಿ ಅಯ್ಯಪ್ಪ ವೃತಧಾರಿಗಳಿಂದ ವಿಶೇಷ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಅ.19 ರಂದು ರಾತ್ರಿ ನಡೆಯಿತು.


ಕ್ಷೇತ್ರದ ಧರ್ಮದರ್ಶಿಯವರಾದ ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದ ವೇಳೆ ಹಲವು ಮಂದಿಯನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ದಂಪತಿಯನ್ನು, ಪುತ್ತೂರು ತಾ.ಪಂ.ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಡಿ.ಒ. ಶಾಂತಾರಾಮ ನಾಯಕ್, ಮದ್ಯಮುಕ್ತತೆಗೆ ಸಹಕಾರ ನೀಡುತ್ತಿರುವ ನವಜೀವನ ಸಮಿತಿಯ ಸುಬ್ಬ ಪಾಟಾಳಿ ಮುಳ್ಯ, ಸುಬ್ಬಯ್ಯ ನಾಯ್ಕ ಬಸವನಪಾದೆ, ಹುಕ್ರಪ್ಪ ನಾಯ್ಕ ಬಸವನಪಾದೆ, ಪರಮೇಶ್ವರ ನಾಯ್ಕ ಬಸವನಪಾದೆ, ಪುತ್ತೂರಿನ ಚಂದ್ರಶೇಖರ ಜೋಗಿ ಹಾಗೂ ಸಿರಾಜ್ ಪುತ್ತೂರುರವರನ್ನು ಶಿವಪ್ರಕಾಶ್ ಅಡ್ಪಂಗಾಯ ಗುರುಸ್ವಾಮಿಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಎನ್.ಎಂ.ಸಿ. ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಹಾಗೂ ಕೆ.ವಿ.ಜಿ. ಪಾಲಿಟೆಕ್ನಿಕ್ ಉಪನ್ಯಾಸಕ ಚಂದ್ರಶೇಖರ ಬಿಳಿನೆಲೆ, ಅಡ್ಪಂಗಾಯ ತೀರ್ಥಪ್ರಸಾದ್, ಚಂದ್ರಶೇಖರ ಅಡ್ಪಂಗಾಯ, ಈಶ್ವರ ವಾರಣಾಶಿ, ಲೋಕೇಶ್ ಪೆರ್ಲಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here