ಗುತ್ತಿಗಾರು:  11 ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ವತಿಯಿಂದ ಗುತ್ತಿಗಾರು ವಲಯದ 11 ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ವಲಯ ಅಧ್ಯಕ್ಷರಾದ ಯೋಗೀಶ್ ದೇವರವರ ಅಧ್ಯಕ್ಷತೆಯಲ್ಲಿ ಗುತ್ತಿಗಾರು ಪಂಚಾಯತ್ ಪ. ವರ್ಗದ ಸಭಾಭವನದಲ್ಲಿ ಅ.19 ರಂದು ನಡೆಸಲಾಯಿತು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ವಿಜಯ ಕುಮಾರ್ ಚಾರ್ಮತರವರು ದೀಪ ಬೆಳಗಿಸುವ ಮುಖೇನ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿದರು.

ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್,
ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ನಾಗೇಶ್ ಪಿ ಸರ್ ರವರು,
ತಾಲೂಕು ಮೇಲ್ವಿಚಾರಕರಾದ ರಮೇಶ್ ತರಬೇತಿ ನೀಡಿದರು.
ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ರವರು ಆಡಿಟ್ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ ವಲಯ ತಾಂತ್ರಿಕ ತರಬೇತಿದಾರರು, ಸೇವಾಪ್ರತಿನಿಧಿಯವರು, ಒಕ್ಕೂಟಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು. ನಾಲ್ಕೂರು ಸೇವಾಪ್ರತಿನಿಧಿರವರಾದ ಹರಿಶ್ಚಂದ್ರ ಕುಳ್ಳಂಪಾಡಿರವರು ಕಾರ್ಯನಿರೂಪಿದರು. ಕಂದ್ರಪ್ಪಾಡಿ ಸೇವಾಪ್ರತಿನಿಧಿಯವರಾದ ತಿಮ್ಮಪ್ಪ ಕಡ್ಯರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here