ಕೆ.ವಿ.ಜಿ. ದಂತ ಮಹಾವಿದ್ಯಾಲಯ :  ಯುವ ರೆಡ್‌ಕ್ರಾಸ್ ವಿಭಾಗದಿಂದ ರಕ್ತದಾನ ಶಿಬಿರ

0

 

ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ವಿಭಾಗ ಮತ್ತು ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು  ನಡೆಸಲಾಯಿತು. ರಕ್ತದಾನ ಮತ್ತು ರಕ್ತ ವರ್ಗಿಕರಣ ಶಿಬಿರವನ್ನು ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ಮೋಕ್ಷ್ಷಾ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ಆಫೀಸರ್ ಡಾ| ಮಹಾಂತ ದೇವರು, ಜನರಲ್ ಪೆಥೋಲಾಜಿಯ ವಿಭಾಗ ಮುಖ್ಯಸ್ಥರಾದ ಡಾ| ಸತ್ಯವತಿ, ಆಡಳಿತ ಪರಿಷತ್ ಸದಸ್ಯರಾದ ಡಾ| ಮನೋಜ್ ಕುಮಾರ್, ಜನರಲ್ ಪೆಥೋಲಾಜಿಯ ಪ್ರೊಫೆಸರ್ ಡಾ. ನವ್ಯ ಬಿ.ಯನ್, ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ| ಪ್ರಸನ್ನ ಕುಮಾರ್ ಡಿ, ಉಪಸ್ಥಿತರಿದ್ದರು.


ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗದ ಪ್ರ್ರಾಧ್ಯಾಪಕಿ ಹಾಗೂ ಯುವ ರೆಡ್‌ಕ್ರಾಸ್ ಘಟಕ ಸಂಚಾಲಕಿ ಡಾ| ರಚನಾ ಪಿ.ಬಿ. ಶಿಬಿರವನ್ನು ಆಯೋಜಿಸಿದ್ದರು. ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳು ರಕ್ತದಾನದಲ್ಲಿ ಪಾಲ್ಗೊಂಡು ಸಹಕರಿಸಿದರು. ಡಾ. ಪಲ್ಲವಿ ಸಾರಥಿ ಕಾರ್ಯಕ್ರಮ ನಿರೂಪಿಸಿದರು.

 

 

LEAVE A REPLY

Please enter your comment!
Please enter your name here