ಪಂಜ: ಕಾಳುಮೆಣಸು ಹಾಗೂ ಇತರೆ ಸಾಂಬಾರು ಬೆಳೆಗಳ ತರಬೇತಿ ಕಾರ್ಯಕ್ರಮ

0

 

ತೋಟಗಾರಿಕೆ ಇಲಾಖೆ ಸುಳ್ಯ, ಬೆಂಗಳೂರು ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ಸಹಾಯ ಯೋಗದೊಂದಿಗೆ ಕಾಳುಮೆಣಸು ಹಾಗೂ ಇತರೆ ಸಾಂಬಾರು ಬೆಳೆಗಳ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವು ಅ.18ರಂದು ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಉದ್ಘಾಟಿಸಿದರು. ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ತೀರ್ಥಾನಂದ ಕೊಡಂಕಿರಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಲ್ಮಡ್ಕದ ಪ್ರಗತಿಪರ ಕೃಷಿಕ ಟಿ ಆರ್ ಸುರೇಶ್ ಚಂದ್ರ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಡಿಕೇರಿ ಅಪ್ಪಂಗಳದ ಹೆಚ್ ಆರ್ ಎಸ್ ಪ್ರಾಂತಿಯ ಕೇಂದ್ರದ ವಿಜ್ಞಾನಿ ಹೊನ್ನಪ್ಪ ಅಸಂಗಿ , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ರೀಮತಿ ಸುಹಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಸುಹಾನ ಸ್ವಾಗತಿಸಿದರು. ವಿಶ್ವನಾಥ ಬೊಳ್ಮಲೆ ಪ್ರಾರ್ಥಿಸಿದರು. ವಿನೋದ್ ಬೊಳ್ಮಲೆ ನಿರೂಪಿಸಿದರು. ಪರಿವಾರ ಪಂಜ ರೈತ ಉತ್ಪಾದಕರ ಕಂಪನಿಯ ಸಿ ಇ ಓ ಸುಜಿತ್ ವಂದಿಸಿದರು.100 ಕ್ಕೂ ಮಿಕ್ಕಿ ರೈತ ಸದಸ್ಯರು ಪಾಲ್ಗೊಂಡಿದ್ದರು.ಎಲ್ಲಾ ಸದಸ್ಯರಿಗೆ ಲಘು ಪೋಷಕಾಂಶಗಳ ಮಿಶ್ರಣ ಕಾಳು ಮೆಣಸು ಸ್ಪೆಷಲ್ ಗೊಬ್ಬರ ಉಚಿತವಾಗಿ ನೀಡಲಾಯಿತು.

 

 

LEAVE A REPLY

Please enter your comment!
Please enter your name here