ಸಂಪಾಜೆ : ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾಗಿ ಯನ್.ಸಿ. ಅನಂತ್ ಊರುಬೈಲು

0

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಸಂಪಾಜೆಯಲ್ಲಿ ನಡೆಸಲು ಉದ್ದೇಶಿಸಿರುವ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು.

 


ಸಭೆಯಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾಗಿ ಯನ್.ಸಿ.ಅನಂತ್ ಊರುಬೈಲು ರವರನ್ನು ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷರಾಗಿ ಬಿ.ಆರ್.ಶಿವರಾಮ ,ಕಾರ್ಯದರ್ಶಿಯಾಗಿ ಯತೀಶ್ ಹನಿಯಡ್ಕ ಮತ್ತು ಕೋಶಾದಿಕಾರಿಯಾಗಿ ಶ್ರೀನಿವಾಸ ನಿಡಿಂಜಿ ರವರು ಆಯ್ಕೆಯಾದರು. ತಲಾ ಐದು ಜನ ಗೌರವ ಸಲಹೆಗಾರರು ಮತ್ತು ಉಪಾಧ್ಯಕ್ಷರನ್ನು ಕೂಡ ಆಯ್ಕೆ ಮಾಡಿಕೊಂಡು ಜವಾಬ್ದಾರಿ ಹಂಚಲಾಯಿತು.
ಸಭೆಯಲ್ಲಿ ಯೋಜನೆಯ ನಿರ್ದೇಶಕರು ,ಶಿಬಿರಾಧಿಕಾರಿಗಳು,ಮೇಲ್ವಿಚಾರಕರು ,ಒಕ್ಕೂಟದ ಪದಾಧಿಕಾರಿಗಳು, ಜನಪ್ರತಿನಿದಿಗಳು ,ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here