ನಾಲ್ವರಿಂದ ಮಜ್ಜಾರು ಕ್ಷೇತ್ರದಲ್ಲಿ ಪ್ರಾರ್ಥನೆ
ಐನೆಕಿದ ಗ್ರಾಮದಲ್ಲಿ ಎರಡು ವಾರಗಳ ಹಿಂದೆ ಗೋವಿನ ರುಂಡ ಕಡಿದ ಪ್ರಕರಣ ಸಂಬಂಧಿಸಿ ಅ.18 ರಂದು
ಶ್ರೀ ಉಳ್ಳಾಕುಲು ರಾಜನ್ ದೈವಸ್ಥಾನ ಮಜ್ಜಾರ ಕ್ಷೇತ್ರದಲ್ಲಿ
ನಾಲ್ವರಿಂದ ಪ್ರಾರ್ಥನೆ ನಡೆಸಿದ್ದಾರೆ. ಶಿವರಾಮ, ಗಿರಿಯಪ್ಪ, ಗಣೇಶ, ಕುಮಾರ ಪ್ರಾರ್ಥನೆ ನಡೆಸಿದ್ದು ಗೋವಿನ ರುಂಡ ಕತ್ತರಿಸಿದ ವಿಚಾರವಾಗಿ ನಾವುಗಳು ಯಾವುದೇ ಕೃತ್ಯ ಎಸಗಿಲ್ಲ. ಚಂದ್ರಶೇಖರ ಎಂಬವರು ಗೋವಿನ ರುಂಡ ಕಡಿದ ಪ್ರಕರಣದಲ್ಲಿ ಇಲ್ಲ ಎಂದಾದರೆ ಇದೇ ಮಜ್ಜಾರು ಕ್ಷೇತ್ರಕ್ಕೆ ಸತ್ಯ ಪ್ರಮಾಣ ಮಾಡಬೇಕೆಂದು ಪ್ರಾರ್ಥಿಸಿದ್ದಾಗಿ ತಿಳಿದು ಬಂದಿದೆ.