ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಸೂರ್ಯ ಗ್ರಹಣದಂದು ದರುಶನಕ್ಕೆ ಅವಕಾಶ

0

 

ಯಾವುದೇ ಸೇವೆ, ಭೋಜನ ಪ್ರಸಾದ ಇಲ್ಲ

ಅ.25ರಂದು ಸೂರ್ಯ ಗ್ರಹಣ ದ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಆದರೆ ಯಾವುದೇ ಸೇವೆಗಳು ನೆರವೇರುವುದಿಲ್ಲ
ಮತ್ತು ಬೋಜನ ಪ್ರಸಾದ ವಿತರಣೆಯೂ ಇರುವುದಿಲ್ಲ.ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ದರುಶನಕ್ಕೆ ಅವಕಾಶ:
ಅ.25ರಂದು ಮಂಗಳವಾರ ಬೆಳಗ್ಗೆ 7 ರಿಂದ 8.30ರ ತನಕ 10.30ರಿಂದ ಮದ್ಯಹ್ನ 1ರ ತನಕ ಹಾಗೂ ಗ್ರಹಣದ ಸಮಯವಾದ 5.11ರಿಂದ 6.28ರ ತನಕ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ನಂತರ ದರುಶನಕ್ಕೆ ಅವಕಾಶ ಇರುವುದಿಲ್ಲ‌.

ಅ.26ರಂದು 9ಗಂಟೆಯಿಂದ ದರುಶನ:
ಅ.26ರಂದು ಮುಂಜಾನೆ ಶ್ರೀ ದೇವಳದಲ್ಲಿ ಶುದ್ದಿ ಕಾರ್ಯದ ಬಳಿಕ ಶ್ರೀ ದೇವರಿಗೆ ಮುಂಜಾನೆ ನಡೆಯುವ
ನಿತ್ಯದ ಪೂಜಾ ವಿದಿವಿಧಾನಗಳು ನೆರವೇರಿದ ನಂತರ ಸುಮಾರು ಬೆಳಗ್ಗೆ 9 ಗಂಟೆಯ ನಂತರ ಶ್ರೀ ದೇವರ ದರುಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.ಆ ಬಳಿಕ ಸೇವಾಧಿಗಳು ಆರಂಭಗೊಳ್ಳಲಿದೆ. ಭಕ್ತರು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here