ಸುಳ್ಯದಲ್ಲಿ ಮರಾಟಿ ಯುವ ವೇದಿಕೆ ಆಶ್ರಯದಲ್ಲಿ ಅಂತರ್ ಜಿಲ್ಲಾ ಹಗ್ಗಜಗ್ಗಾಟ ಮತ್ತು ಕ್ರೀಡಾಕೂಟ ಉದ್ಘಾಟನೆ

0

 

ಸಮುದಾಯದ ಯುವಕರು ಕೀಳರಿಮೆ ಬಿಟ್ಟು ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು; ಡಾ.ಸುಂದರ್ ನಾಯ್ಕ್

ಮರಾಟಿ ಸಮಾಜ ಸೇವಾ ಸಂಘ ಸುಳ್ಯ, ಮರಾಟಿ ಮಹಿಳಾ ವೇದಿಕೆ ಸುಳ್ಯ ಇದರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಮರಾಟಿ ಯುವ ವೇದಿಕೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮರಾಟಿ ಸಮುದಾಯ ಬಾಂಧವರಿಗಾಗಿ 8 ಜನರ ಸೀಮಿತವಿರುವ,450+5 ಕೆ.ಜಿ.ವಿಭಾಗದ ಪುರುಷರ ಮತ್ತು 7 ಜನರ ಸೀಮಿತವಿರುವ ಮಹಿಳೆಯರ ಅಂತರ್ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ (ಇಂಟರ್ ಲಾಕ್) ಪಂದ್ಯಾಟ ಮತ್ತು ಮರಾಟಿ ಸಮುದಾಯದ ಮಹಿಳೆಯರಿಗೆ,ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳ ಉದ್ಘಾಟನೆ ಇಂದು ಗಿರಿದರ್ಶಿನಿ ಮರಾಟಿ ಸಮುದಾಯ ಭವನ ಅಂಬಟೆಡ್ಕ ಸುಳ್ಯ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ಧನ ಬಿ.ಕುರುಂಜಿಭಾಗ್ ವಹಿಸಿದ್ದರು. ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವರಾದ ಡಾ. ಕೆ.ಸುಂದರ ನಾಯ್ಕ್ ನೆರವೇರಿಸಿ ಮಾತನಾಡಿ ಮರಾಟಿ ಸಮುದಾಯದ ಯುವಕರು ಕೀಳರಿಮೆ ಬಿಟ್ಟು ಸಮಾಜದಲ್ಲಿ ಮುಂದೆ ಬರಬೇಕು. ಎಂದರು. ಮುಖ್ಯ ಅತಿಥಿಗಳಾಗಿ ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು, ನ.ಪಂ.ಸದಸ್ಯರಾದ ಜಿ.ಬುದ್ಧ ನಾಯ್ಕ್, ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ., ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಭಾಗವಹಿಸಿದ್ದರು.ಮರಾಟಿ ಯುವ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷ ಮೋಹನ್ ಪೆರಾಜೆ, ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮ.ಸ.ಸೇವಾ ಸಂಘದ ಸದಸ್ಯ ಮೋನಪ್ಪ ನಾಯ್ಕ ಸೌದಾಮಿನಿ ನೀಡಿದ ಜೆರ್ಸಿ ಮತ್ತು ಮಹಿಳಾ ವೇದಿಕೆಯ ಸದಸ್ಯೆ ಶ್ರೀಮತಿ ಪದ್ಮಾವತಿ ನೀಡಿದ ಕ್ಯಾಂಪ ನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.


ಯುವ ವೇದಿಕೆಯ ಜತೆ ಕಾರ್ಯದರ್ಶಿ ರಮೇಶ್ ನೀರಬಿದಿರೆ ಸ್ವಾಗತಿಸಿ, ಬಾಲಕೃಷ್ಣ ನಾಯ್ಕ್ ಅಜ್ಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸದಸ್ಯ ಅಶೋಕ್ ದೊಡ್ಢೇರಿ ವಂದಿಸಿದರು. ರಘುನಾಥ ಜಟ್ಟಿಪ್ಪಳ್ಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here