ಗುತ್ತಿಗಾರಿನಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಮತ್ತು ಡ್ರೈವಿಂಗ್ ಸ್ಕೂಲ್ ಶುಭಾರಂಭ

0

ಸುಳ್ಯದ ದ್ವಾರಕಾ ಹೋಟೆಲ್ ಬಳಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಅರಂತೋಡು ಕನ್ನಡ್ಕ ಕಿರ್ಲಾಯದ ಸ್ವಾತಿಕ್ ಕೆ.ಎಲ್ ಮಾಲಕತ್ವದ ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಇನ್ನೊಂದು ಸಂಸ್ಥೆ ಗುತ್ತಿಗಾರಿನ ನಿವೇದಿತಾ ಸಂಕೀರ್ಣದಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಅ.26 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು.

ಸಂಸ್ಥೆಯನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಮಹಾಬಲೇಶ್ವರ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಮುತ್ತಪ್ಪ ತಿರುವಪ್ಪ ದೇವಸ್ಥಾನದ ಮೊಕ್ತೇಸರ ವೆಂಕಟ್ ವಳಲಂಬೆ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗುತ್ತಿಗಾರು ಬಿ.ಎಂ.ಎಸ್ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಧರ್ಮಪಾಲ ಪಿ.ಎಂ, ಗುತ್ತಿಗಾರು ಚರ್ಚ್ ಧರ್ಮಗುರು ಫಾ.ಆದರ್ಶ್ ಜೋಸೆಫ್, ಅಮರಸೇನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ನಿವೇದಿತಾ ಸಂಕೀರ್ಣದ ಮಾಲಕ ವಚನ್ ಡಿ.ಪಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರ ಗ್ರಾ.ಪಂ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಯುವ ತೇಜಸ್ಸು ಟ್ರಸ್ಟ್ ನ ಗುರುಪ್ರಸಾದ್ ಪಂಜ ಭಾಗವಹಿಸಿದರು.


ಈ ಸಂದರ್ಭದಲ್ಲಿ ಮಾಲಕರ ತಂದೆ ಲೋಕೇಶ್ವರ ಕೆ, ತಾಯಿ ಮನೋರಮಾ, ಪುಷ್ಪಾಧರ್ ಕೆ.ಜಿ, ಕೇಶವ ಅಡ್ತಲೆ, ಶರತ್, ಆಶಿಕ್ ಕನ್ನಡ್ಕ ಕಿರ್ಲಾಯ, ಶರತ್ ಬೊಮ್ಮಟ್ಟಿ, ಯತಿನ್ ಸುಳ್ಯ, ವಿಜಯ್ ಕುಮಾರ್ ರಿಕ್ಷಾ, ಕಿಶೋರ್ ಕುಮಾರ್ ಅಡ್ಕಬಳೆ, ಲತಾಶ್ರೀ, ಭವಿತಾ, ಲಿಖಿತಾ ಮತ್ತಿತರರು ಉಪಸ್ಥಿತರಿದ್ದರು. ಸೋಮಶೇಖರ್ ದೇವ ಕಾರ್ಯಕ್ರಮ ನಿರೂಪಿಸಿದರು.