ಆಲೆಟ್ಟಿ : ಮೊರಂಗಲ್ಲು ತಿರುವಿನಲ್ಲಿ ಕಾರು ಪಲ್ಟಿ- ಚಾಲಕ ಅದೃಷ್ಟವಶಾತ್ ಪಾರು

0

 

 

ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುತ್ತಿದ್ದ ಹೋಂಡಾ ಸಿಟಿ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ಮನೆಯ ಅಂಗಳಕ್ಕೆ ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ.

ಬೆಳ್ತಂಗಡಿಯಿಂದ ವ್ಯಕ್ತಿಯೊಬ್ಬರು ತನ್ನ ಕಾರಿನಲ್ಲಿ ಕೇರಳದ ಬಂದಡ್ಕ ಕಡೆಗೆ ಆಲೆಟ್ಟಿ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಮೊರಂಗಲ್ಲು ಸೀತಾರಾಮ ಎಂಬವರ ಮನೆಯ ಬಳಿಯ ತಿರುವಿನಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿ ಚಾಲಕ ಮಾತ್ರ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾರಿನ ಎರಡು ಏರ್ ಬ್ಯಾಗ್ ತೆರೆದುಕೊಂಡಿದ್ದು ಅತೀ ವೇಗದಿಂದ ಕಾರು ಚಲಾಯಿಸಿಕೊಂಡು ಬಂದುದರಿಂದ ತಿರುವಿನಲ್ಲಿ ನಿಯಂತ್ರಣ ಸಿಗದೇ ಪಲ್ಟಿ ಹೊಡೆದಿದೆ ಎಂದು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ತಿಳಿಸಿರುತ್ತಾರೆ. ಕಾರಿನ ಬಹುತೇಕ ಭಾಗ ಜಖಂ ಗೊಂಡಿದೆ.