ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ

0

ಸುಳ್ಯದ ಸೈಂಟ್ ಜೋಸೆಪ್ ವಿದ್ಯಾಸಂಸ್ಥೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ “ಕೋಟಿ ಕಂಠ ಗಾಯನ” ನನ್ನ ನಾಡು ನನ್ನ ಹಾಡು ಕಾರ್ಯಕ್ರಮ ಅಕ್ಟೋಬರ್ 28 ರಂದು ನಡೆಯಿತು.

ಸೈಂಟ್ ಜೋಸೆಪ್ ಸಂಸ್ಥೆಯ ವಿದ್ಯಾರ್ಥಿ ಬಳಗ ದವರು ಹಾಡುಗಳನ್ನು ಸಾದರಪಡಿಸಿದರು.

 

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಫಾ.ವಿಕ್ಟರ್ ಡಿಸೋಜ, ಮುಖ್ಯೋಪಾಧ್ಯಾಯಿನಿ ಸಿ। ಬಿನೋಮ, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಕಾರ್ಯದರ್ಶಿಗಳಾದ ಶ್ರೀಮತಿ ಚೇತನಾ, ಮಮತಾ ಉಪಸ್ಥಿತರಿದ್ದರು.ಶಾಲಾ ಕನ್ನಡ ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೌಢಶಾಲೆ ವಿಭಾಗದ ಕನ್ನಡ ಶಿಕ್ಷಕಿ ಶ್ರೀಮತಿ ದೇವಿಲತಾ ಸಂಕಲ್ಪ ವಿಧಿ ಬೋಧಿಸಿದರು. ಸಹಶಿಕ್ಷಕಿ ಶ್ರೀಮತಿ ಜೂಲಿಯೆಟ್ ವಂದಿಸಿ, ಕನ್ನಡ ಶಿಕ್ಷಕಿ ಶ್ರೀಮತಿ ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.