ಗ್ರಾಮ ಪಂಚಾಯತ್ ನೌಕರರಿಗೆ ‘ಸಿ ‘ಮತ್ತು ‘ಡಿ’ ದರ್ಜೆಯ ಸ್ಥಾನಮಾನಕ್ಕಾಗಿ ಹೋರಾಟಕ್ಕೆ ನಿರ್ಧಾರ

0

 

ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ದಯಾನಂದ ಪೆರುವಾಜೆ ಮತ್ತು ಪುಟ್ಟರಾಜು ಮರ್ಕಂಜ ಆಯ್ಕೆ

ಗ್ರಾಮ ಪಂಚಾಯತ್ ನೌಕರರಿಗೆ ‘ಸಿ ‘ಮತ್ತು ‘ಡಿ’ದರ್ಜೆಯ ಸ್ಥಾನಮಾನ ನೀಡಬೇಕೆಂದು ರಾಜ್ಯ ಮಟ್ಟದ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ.


ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಹೋರಾಟ ಸಮಿತಿಯೊಂದಿಗೆ ಸೇರಿ ಜಿಲ್ಲೆಯಲ್ಲಿ ಸದೃಢವಾಗಿ ಬಲಿಷ್ಟ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ದ.ಕ.ಜಿಲ್ಲೆಯ ಹೋರಾಟ ಸಮಿತಿಯ ಅಧ್ಯಕ್ಷರಾದ ದಯಾನಂದ ಮಠತ್ತಡ್ಕ ಪೆರುವಾಜೆ ಮತ್ತು ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಪುಟ್ಟರಾಜು ಮರ್ಕಂಜ ಇವರಿಗೆ ನೀಡಲಾಗಿದೆ.
ಅ.30 ರಂದು ಮಡಿಕೇರಿಯ ಕಾಂತೂರು ಮೂರ್ನಾಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಹೋರಾಟದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಇವರಿಗೆ ಉಸ್ತುವಾರಿಯನ್ನು ನೀಡಲಾಯಿತು.