ಬಾಳುಗೋಡು: ಕಾರ್ತಿಕ ದೀಪೋತ್ಸವ ಹಾಗೂ ಗೋಪೂಜೆ ಕಾರ್ಯಕ್ರಮ

0

 

ಕಾರ್ತಿಕ ಮಾಸದ ಪ್ರಯುಕ್ತ ಬಾಳುಗೋಡಿನಲ್ಲಿ ಸ್ಥಳೀಯರು ಸೇರಿ ಕಾರ್ತಿಕ ದೀಪೋತ್ಸವ ಹಾಗೂ ಗೋಪೂಜೆ ಕಾರ್ಯಕ್ರಮ ಅ.30 ರಂದು ನಡೆಯಿತು.

ಬೆಟ್ಟುಮಕ್ಕಿ ಶ್ರೀ ಶೀರಾಡಿ ದೈವಸ್ಥಾನದಲ್ಲಿ ದೀಪನಮಸ್ಕಾರ ನೆರವೇರಿಸಿ ಗೋಮಾತೆಯನ್ನು ವಾದ್ಯ, ಕುಣಿತ ಭಜನೆ ಹಾಗೂ ಪಂಜಿನ ಮೆರವಣಿಗೆಯಲ್ಲಿ ಬಾಳುಗೋಡು ಶಾಲ ವಠಾರಕ್ಕೆ ಕರೆತಂದು ಅಲ್ಲಿ ಗೋಪೂಜೆ ನೆರವೇರಿಸಲಾಯಿತು.


ಬಳಿಕ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಯಶೋಧ ರಾಮಚಂದ್ರ ಇವರಿಂದ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ವೇದಿಕೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಜುಗೋಡು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು
ಕಾರ್ಯಕ್ರಮದ ಕೊನೆಯಲ್ಲಿ ಸಿಡಿಮದ್ದಿನ ಪ್ರದರ್ಶನ ಹಾಗೂ ಲಘು ಪಾನೀಯದ ವ್ಯವಸ್ಥೆಯನ್ನು ಮಾಡಲಾಯಿತು.

(ವರದಿ :ಕುಶಾಲಪ್ಪ ಕಾಂತುಕುಮೇರಿ)