ಅರಂತೋಡು : ನೇಣು ಬಿಗಿದು ಆತ್ಮಹತ್ಯೆ 

0
1991

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡಿನಿಂದ ಅ. 31ರಂದು ಸಂಜೆ ವರದಿಯಾಗಿದೆ.

p>

ಅರಂತೋಡು ಗ್ರಾಮದ ಉಳುವಾರು ತೀರ್ಥಪ್ರಸಾದ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು.

ತೀರ್ಥಪ್ರಸಾದ್ರವರು ತಮ್ಮ ಮನೆಯ ಹಿಂದಿನ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಹಿಂದೆಯೂ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಮರಣೊತ್ತರ ಪರೀಕ್ಷೆ ನಡೆಸಿದರು.

 

ಮೃತರು ಪತ್ನಿ ಪದ್ಮಾವತಿ, ಪುತ್ರ ರಕ್ಷಿತ್, ಪುತ್ರಿ ಹವ್ಯ ಮತ್ತು ಬಂಧು- ಮಿತ್ರರನ್ನು ಅಗಲಿದ್ದಾರೆ. ಇವರಿಗೆ 45 ವರ್ಷ ವಯಸ್ಸಾಗಿತ್ತು.

LEAVE A REPLY

Please enter your comment!
Please enter your name here