ನಾಡಪ್ರಭು ಕೆಂಪೇಗೌಡರ ಪ್ರತಿಮೆ : ಮೃತ್ತಿಗೆ ಸಂಗ್ರಹಣಾ ರಥ ಸುಳ್ಯಕ್ಕೆ ಆಗಮನ

0

 

ಸಚಿವ ಅಂಗಾರ ಸಹಿತ ಗಣ್ಯರಿಂದ ಭವ್ಯ ಸ್ವಾಗತ – ಪೂರ್ಣಕುಂಭ ಮೆರವಣಿಗೆ

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣದ ಹಿನ್ನಲೆಯಲ್ಲಿ ಮೃತ್ತಿಗೆ ಸಂಗ್ರಹಣೆ ನಡೆಯುತ್ತಿದ್ದು, ರಥ ಇಂದು ಸುಳ್ಯಕ್ಕೆ ಆಗಮಿಸಿದೆ.

ಸುಳ್ಯ ಜ್ಯೋತಿ ಸರ್ಕಲ್ ಬಳಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಣ್ಯರು ರಥಕ್ಕೆ ಪುಷ್ಪಾರ್ಚನೆಗೈದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ತಾ.ಪಂ. ಇ.ಒ. ಭವಾನಿಶಂಕರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಡಾ.ಲೀಲಾಧರ್ ಡಿ.ವಿ., ಚಂದ್ರಶೇಖರ ಪೇರಾಲು, ಹರೀಶ್ ಕಂಜಿಪಿಲಿ, ಬೆಳ್ಯಪ್ಪ ಗೌಡ ಬಳ್ಳಡ್ಕ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಸಿಡಿಪಿಒ ರಶ್ಮಿ ಅಶೋಕ್, ವೆಂಕಟ್ ವಳಲಂಬೆ, ದೊಡ್ಡಣ್ಣ ಬರೆಮೇಲು, ಬಾಲಗೋಪಾಲ ಸೇರ್ಕಜೆ, ರಾಧಾಕೃಷ್ಣ ಬೊಳ್ಳೂರು, ಸುಭೋದ್ ಶೆಟ್ಟಿ ಮೇನಾಲ, ವಿನುತಾ ಪಾತಿಕಲ್ಲು, ಬಾಲಚಂದ್ರ ದೇವರಗುಂಡ, ಸಮಾಜಕಲ್ಯಾಣಾಧಿಕಾರಿ ರವಿಕುಮಾರ್ ಸಹಿತ, ನ.ಪಂ.‌ಸದಸ್ಯರು, ಕೆ.ವಿ.ಜಿ. ವಿದ್ಯಾಸಂಸ್ಥೆಯವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.

ಪೂರ್ಣಕುಂಭದೊಂದಿಗೆ ನಗರದಲ್ಲಿ ಮೆರವಣಿಗೆ ನಡೆಯಿತು.