ಕುಕ್ಕುಜಡ್ಕ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಸೌಖ್ಯದಿಂದ ಸಾವು

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2 ನೇ ತರಗತಿ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್ ಕೆ.ಸಿ. ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನ.1 ರಂದು ವರದಿಯಾಗಿದೆ‌.


ಬಾಲಕ ಎಂದಿನಂತೆ ಶಾಲೆಗೆ ಬಂದಿದ್ದು ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು. ಮಧ್ಯಾಹ್ನ ದ ವೇಳೆಗೆ ಬಾಲಕನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಕರು ದೂರವಾಣಿ ಮೂಲಕ ಜ್ವರ ಇರುವ ಬಗ್ಗೆ ಅವನ ಪೋಷಕರಿಗೆ ತಿಳಿಸಿದರು. ಬಾಲಕನ ತಂದೆ ಚಂದ್ರಶೇಖರ ಆಚಾರ್ಯ ರವರು ಶಾಲೆಗೆ ಬಂದಿರುವ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದಿರುತ್ತಾನೆ. ತಕ್ಷಣ ಶಿಕ್ಷಕರು ಹಾಗೂ ಸ್ಥಳೀಯ ರು ಸೇರಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಬಾಲಕನಿಗೆ ಹೃದಯಾಘಾತ ಸಂಭವಿಸಿದ್ದರಿಂದ ಮೃತ ಪಟ್ಟಿರುವುದಾಗಿ ತಿಳಿಸಿದರೆಂದು ತಿಳಿದು ಬಂದಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಿ ವೈದ್ಯರು ಜೀವ ಉಳಿಸಲು ಸತತವಾಗಿ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಬಾಲಕನ ತಂದೆ ಚಂದ್ರಶೇಖರ ಆಚಾರ್ಯ ಕುಂಟಿಕಾನ ಅದೇ ಶಾಲೆಯ ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾಗಿದ್ದರು, ತಾಯಿ ಗೀತಾ ಮತ್ತು ಓರ್ವ ಸಹೋದರ ಅಕ್ಷಯ್ 6‌ನೇ ತರಗತಿ ವಿದ್ಯಾರ್ಥಿ ಹಾಗೂ ಬಂಧುಗಳನ್ನು, ಸಹಪಾಠಿ ಮಿತ್ರರನ್ನು ಅಗಲಿರುತ್ತಾನೆ.