ಪಂಜಿಕಲ್ಲು: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ನಿರ್ಮಾಣ

0

ವಾಹನ ಸವಾರರ ಪರದಾಟ

ಜಾಲ್ಸೂರು – ಕಾಸರಗೋಡು ಅಂತರರಾಜ್ಯ ರಸ್ತೆಯ ಪಂಜಿಕಲ್ಲು ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು, ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿದೆ.


ಪಂಜಿಕಲ್ಲು ತೂಗುಸೇತುವೆಯ ಬಳಿ ತಿರುವಿನಲ್ಲಿ ಡಾಮಾರು ರಸ್ತೆಯಲ್ಲಿರುವ ಹೊಂಡ ನಿರ್ಮಾಣಗೊಂಡಿದ್ದು, ದ್ವಿಚಕ್ರ ಸೇರಿದಂತೆ ಭಾರೀ ಗಾತ್ರದ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ರಸ್ತೆ ಇದ್ದು, ಸಂಬಂಧಪಟ್ಟ ಇಲಾಖೆ ಇದರತ್ತ ಗಮನಹರಿಸಬೇಕಾಗಿದೆ.