ಸಂಪಾಜೆಯಲ್ಲಿ ಕೆಂಪೇಗೌಡ ಪ್ರತಿಮೆ ಮೃತ್ತಿಕೆ ಸಂಗ್ರಹಣಾ ರಥಕ್ಕೆ ಸ್ವಾಗತ

0

ನಾಡ ಪ್ರಭು ಕೇಪೇಗೌಡ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥಕ್ಕೆ ಸಂಪಾಜೆ ದ. ಕ. ಗ್ರಾಮ ಪಂಚಾಯತ್ ಬಳಿ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಕೆಂಪೇಗೌಡ ರಥಕ್ಕೆ ಪುಷ್ಪರ್ಚಣೆ ಮಾಡಿ ಪವಿತ್ರ ಮಣ್ಣು ಸಮರ್ಪಿಸಿದರು. ಮಾಜಿ ಅಧ್ಯಕ್ಷರು ನಿವೃತ ಸೈನಿಕರಾದ ಕೆ. ಪಿ. ಜಗದೀಶ್ ಮಾತನಾಡಿ ನಾಡ ದೊರೆ ಕಟ್ಟಿದ ಸುಂದರ ನಾಡಿನ ಕಲ್ಪನೆ ತೆರೆದಿಟ್ಟರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಕಂಚಿನ ಪ್ರತಿಮೆ ಬಗ್ಗೆ ಮಾಹಿತಿಯನ್ನು ನೀಡಿದರು.

ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಸುಮತಿ ಶಕ್ತಿವೇಲು, ರಜನಿ ಶರತ್. ವಿಜಯಕುಮಾರ್, ವಿಮಲಾ, ಸೊಸೈಟಿ ನಿರ್ದೇಶಕಿ ಯಮುನಾ. ಬಿ. ಎಸ್. ರಾಜೀವೀ ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ, ಗ್ರಾಮ ಸಹಾಯಕ ಸೋಮನಾಥ್,ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಅಂಗನವಾಡಿ, ಆಶಾ ಕಾರ್ಯಕರ್ತರು, ಲಯನ್ಸ್ ಕ್ಲಬ್ ಸದಸ್ಯರು. ಕಿಶೋರ್ ಕುಮಾರ್. ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಕೇಶವ ಬಂಗ್ಲೆ ಗುಡ್ಡೆ, ಸವಿನ, ಉಮೇಶ್, ಭರತ್, ಗೋಪಮ್ಮ, ಸವಿತಾ ಕಿಶೋರ್, ಮಧುರ, ನಸೀಮಾ. ಸಂಜೀವಿನಿ ಒಕ್ಕೂಟದ ಕಾಂತಿ ಬಿ.ಎಸ್. ಯಶೋದಾ, ಸೌಮ್ಯ. ಮಾಜಿ ಪಂಚಾಯತ್ ಸದಸ್ಯರಾದ ನಾಗೇಶ್ ಪಿ.ಆರ್ . ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರುಗಳು ಪೂರ್ಣ ಕುಂಭ ಸ್ವಾಗತದಲ್ಲಿ ಭಾಗವಹಿಸಿದರು.