ರೋಟರಿ ವಿದ್ಯಾಸಂಸ್ಥೆ : ಯುವ ರೆಡ್ ಕ್ರಾಸ್ ಸಂಸ್ಥೆಯ ಪ್ರಾರಂಭೋತ್ಸವ

0

ಸುಳ್ಯದ ರೋಟರಿ ಪದವಿ ಪೂರ್ವ ಕಾಲೇಜು ಮಿತ್ತಡ್ಕ ಇದರ ಯುವ ರೆಡ್ ಕ್ರಾಸ್ ಸಂಸ್ಥೆಯ ಪ್ರಾರಂಭೋತ್ಸವವು ಅ.29 ರಂದು ನಡೆಯಿತು.


ಸಂಸ್ಥೆಯ ಸಂಚಾಲಕರಾದ ರೊಟೇರಿಯನ್ ಗಿರಿಜಾ ಶಂಕರ್ ತುದಿಯಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಳ್ಯದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ ಬಿ ಸುಧಾಕರ ರೈ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ ಇದರ ಜಿಲ್ಲಾ ಪ್ರತಿನಿಧಿಯಾದ ಸಿ ಎ ಗಣೇಶ್ ಭಟ್ ರವರು ಉಪಸ್ಥಿತರಿದ್ದು ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ರೊಟೇರಿಯನ್ ಶ್ರೀಮತಿ ಮೀನಾಕ್ಷಿ ಕೊಂರ್ಬಡ್ಕ, ರೊಟೇರಿಯನ್ ದಯಾನಂದ ಆಳ್ವ ,ರೋಟರಿ ಪಿ ಯು ಕಾಲೇಜು ಇದರ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ , ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ,ಸಂಸ್ಥೆಯ ಉಪನ್ಯಾಸಕರು ಮತ್ತು ಜೂನಿಯರ್ ರೆಡಿಕ್ರಾಸ್ ಘಟಕ ಇದರ ಕೌನ್ಸಿಲರ್ ಹರ್ಷಿತ್ ರವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಪ್ರತಿನಿಧಿಗಳಾಗಿ ಕುಮಾರಿ ದಿಶಾಲಕ್ಷ್ಮಿ ( ದ್ವಿತೀಯ ವಾಣಿಜ್ಯ ವಿಭಾಗ) ಹಾಗೂ ಶ್ರವಣ್ ಶೇಡಿಕಜೆ(ದ್ವಿತೀಯ ವಿಜ್ಞಾನ ವಿಭಾಗ) ಭಾಗವಹಿಸಿದ್ದರು . ಕುಮಾರಿ ದಿಶಾಲಕ್ಷ್ಮಿ ಸ್ವಾಗತಿಸಿ.ಕುಮಾರಿ ಅಶ್ವಿನಿ ಇವರು ನಿರೂಪಿಸಿ ಜೀವನ್ ಧನ್ಯವಾದವಿತ್ತರು.