ಜ್ಞಾನದೀಪ ವಿದ್ಯಾಸಂಸ್ಥೆಯ  ವಿದ್ಯಾರ್ಥಿಗಳಿಗೆ ವೈಯಕ್ತಿಕ ಚಾಂಪಿಯನ್ಸ್

0

ಅ31 ರಂದು ಎಲಿಮಲೆಯಲ್ಲಿ ಜರುಗಿದ ಗುತ್ತಿಗಾರು ವಲಯ ಮಟ್ಟದ ಆತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜ್ಞಾನದೀಪ ಎಲಿಮಲೆಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ 4 ವಿಭಾಗಗಳಲ್ಲಿಯೂ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಹಂಶಿಕಾ ಮೀನಾಜೆ 100,200 ಮೀಟರ್ ಓಟದಲ್ಲಿ ಪ್ರಥಮ, ರಿಲೇಯಲ್ಲಿ ದ್ವಿತೀಯ, 8 ನೇ ತರಗತಿ ಬಾಲಕಿಯರ ವಿಭಾಗದಲ್ಲಿ ವೀಕ್ಷಾ ಹೊಸೋಲಿಕೆ 100,200 ಮೀಟರ್ ನಲ್ಲಿ ಹಾಗೂ ಹೈಜಂಪ್ ನ ಮೂರು ಸ್ಪರ್ಧೆಗಳಲ್ಲಿ ಪ್ರಥಮ, 8 ನೇ ತರಗತಿ ಬಾಲಕರ ವಿಭಾಗದಲ್ಲಿ ಚೇತನ್ ಮುಂಡೋಡಿ ಲಾಂಗ್ ಜಂಪ್ ಹಾಗೂ ಹೈಜಂಪ್ ನಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ, ಹೈಸ್ಕೂಲ್ ಬಾಲಕರ ವಿಭಾಗದಲ್ಲಿ ಶಮಂತ್ ಮಲ್ಲಾಜೆ ಡಿಸ್ಕಸ್ ಥ್ರೋ ಮತ್ತು ಹ್ಯಾಮರ್ ಥ್ರೋನಲ್ಲಿ ಪ್ರಥಮ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು 4 ವಿಭಾಗಗಳಲ್ಲಿಯೂ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರೆ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೋಧನ್ 100 ಮತ್ತು 200 ಮೀಟರ್ ನಲ್ಲಿ ಪ್ರಥಮ,ಅದಿತ್ ಉಬರಡ್ಕ 100 ಮೀಟರ್ ನಲ್ಲಿ ತೃತೀಯ,ಶ್ರೇಯ ಕೊರಂಬಡ್ಕ 600 ಮೀಟರ್ ನಲ್ಲಿ ಪ್ರಥಮ, 400 ಮತ್ತು ರಿಲೇ ಯಲ್ಲಿ ದ್ವಿತೀಯ, ಸಾನ್ವಿ ಪರಮಲೆ 600 ಮೀಟರ್ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಚಿಂತನ್ ತಳೂರ್ 400 ಮೀಟರ್ ನಲ್ಲಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಕೃತಿಕಾ. ಜಿ. ಬಾಳುಗೋಡ್ 400 ಮೀಟರ್ ಹಾಗೂ ರಿಲೇಯಲ್ಲಿ ದ್ವಿತೀಯ, ಪೂಜಾಶ್ರೀ ದೋಳ ರಿಲೇ ದ್ವಿತೀಯ ಹಾಗೂ 200 ಮೀಟರ್ ತೃತೀಯ, ಸಮೀಕ್ಷಾ ಮೇರ್ಕಜೆ ರಿಲೇಯಲ್ಲಿ ದ್ವಿತೀಯ ಮತ್ತು ಹರ್ಡ್ ಲ್ಸ್ ನಲ್ಲಿ ತೃತೀಯ, ರಚಿತಾ ಬಲ್ಕಾಡಿ ರಿಲೇಯಲ್ಲಿ ದ್ವಿತೀಯ ಹಾಗೂ ದೀಕ್ಷಿತಾ ತಿಪ್ಪನೂರು ಎತ್ತರಜಿಗಿತದಲ್ಲಿ ತೃತೀಯ ಸ್ಥಾನ ಪಡೆದು ನವೆಂಬರ್ 8 ಹಾಗೂ 9 ರಂದು ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.