ಎನ್.ಎಂ.ಸಿ. ಸಮಾಜಕಾರ್ಯ ವಿಭಾಗದಿಂದ ಅಧ್ಯಯನ ಪ್ರವಾಸ

0

 

ನೆಹರು ಮೆಮೊರಿಯಲ್ ಕಾಲೇಜು, ಸುಳ್ಯ ಸಮಾಜಕಾರ್ಯ ವಿಭಾಗ ಇದರ ವತಿಯಿಂದ ಒಂದು ದಿನದ ಅಧ್ಯಯನ ಭೇಟಿಯನ್ನು ಗ್ರಾಮೀಣ ಅಭಿವೃದ್ಧಿ ಕೇಂದ್ರ ಕೊಡಗು ಮತ್ತು ಸ್ವಸ್ಥ ಪುನರ್ವಸತಿ ಕೇಂದ್ರ ಶುಂಠಿಕೊಪ್ಪ ಇಲ್ಲಿಗೆ ಕೈಗೊಳ್ಳಲಾಯಿತು. ಗ್ರಾಮೀಣ ಅಭಿವೃದ್ಧಿ ಕೇಂದ್ರ ಕೊಡಗು ಇಲ್ಲಿಯ ಸಂಯೋಜಕರಾಗಿರುವ ರಾಯ್ ಡೇವಿಡ್ ಆದಿವಾಸಿ ಜನಾಂಗದ ಜೀವನಶೈಲಿ, ಕಾರ್ಯ ಚಟುವಟಿಕೆ ಬಗ್ಗೆ ಹಾಗೂ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿಯನ್ನು ನೀಡಿದರು.
ನಂತರ ಸ್ವಸ್ಥ ಪುನರ್ ವಸತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಏಳಿಗೆಗಾಗಿ ಅನೇಕ ಅಂಗವೈಪಲ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಅನೇಕ ಸಿಬ್ಬಂದಿ ಗಳೊಂದಿಗೆ ಹಾಗೂ. ಸಂಸ್ಥೆಯ ಸಂಯೋಜಕರೊಂದಿಗೆ ವಿದ್ಯಾರ್ಥಿಗಳ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಅನೇಕ ಮಾಹಿತಿಯನ್ನು ಪಡೆದರು. ಸಮಾಜ ಕಾರ್ಯದ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಸಕ್ರಿಯವಾಗಿ ಪಾಲ್ಗೊಂಡರು.