ಸುಳ್ಯ ರಾಮ ಭಜನಾ ಮಂದಿರದಲ್ಲಿ ತಾಲೂಕಿನ ಆಯ್ದ ಭಜನಾ ಮಂಡಳಿಗಳ ಭಜನಾ ಸ್ಪರ್ಧೆ- 2022

0

 


ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ತಾಲೂಕಿನ ಆಯ್ದ ಭಜನಾ ಮಂಡಳಿ ಗಳ ಭಜನಾ ಸ್ಪರ್ಧೆಯು ಇಂದು ಬೆಳಗ್ಗೆ ಆರಂಭಗೊಂಡಿತು. ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರೋಹಿತ್ ನಾಗರಾಜ ಭಟ್ ಹಾಗೂ ಸಮಿತಿ ಪದಾಧಿಕಾರಿಗಳಾದ ಮಹಾಬಲ ಕೇರ್ಪಳ, ಭಾಸ್ಕರ ನಾಯರ್ ಅರಂಬೂರು, ಗೋಪಾಲ ನಡುಬೈಲು, ಗಣೇಶ್ ಆಚಾರ್ಯ ಸುಳ್ಯ, ಶ್ರೀನಿವಾಸ ಸುಳ್ಯ, ಪ್ರಭಾಕರ ನಾಯರ್, ಅನಿಲ್ ಕುಮಾರ್ ಕೇರ್ಪಳ, ಆನಂದ ಬೆಟ್ಟಂಪಾಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಸ್ಪರ್ಧೆಯಲ್ಲಿ ಸುಮಾರು 12 ತಂಡಗಳು ಭಾಗವಹಿಸಲಿರುವುದು. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.