ತಾ.ಪಂ. ಕಚೇರಿ ಆವರಣದಲ್ಲಿ ಅಂತಿಮ ದರ್ಶನದ ಬಳಿಕ ಸುಬ್ರಹ್ಮಣ್ಯಕ್ಕೆ ಕೊಂಡೊಯ್ದ ಯು.ಡಿ. ಶೇಖರ್ ಪಾರ್ಥಿವ ಶರೀರ

0

ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಸುಬ್ರಹ್ಮಣ್ಯ ಗ್ರಾ.ಪಂ. ಪಿ.ಡಿ.ಒ. ಯು.ಡಿ. ಶೇಖರ್‌ರವರ ಮೃತದೇಹದ ಮರಣೋತ್ತರ ಶವ ಪರೀಕ್ಷೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಡೆದ ಬಳಿಕ ಮಧ್ಯಾಹ್ನ 12  ಗಂಟೆಗೆ ಪಾರ್ಥಿವ ಶರೀರವನ್ನು ಸುಳ್ಯ ತಾ.ಪಂ. ಕಚೇರಿ ಆವರಣಕ್ಕೆ ತರಲಾಯಿತು.

ಅಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಬಹುತೇಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರ್ ಸಹಿತ ಇಲಾಖಾಧಿಕಾರಿಗಳು, ತಾ.ಪಂ. ಕಚೇರಿ ಮತ್ತು ಇತರ ಇಲಾಖೆಗಳ ಸಿಬ್ಬಂದಿಗಳು, ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ಭರತ್ ಮುಂಡೋಡಿ, ಪಿ.ಸಿ. ಜಯರಾಮ್, ಎಂ. ವೆಂಕಪ್ಪ ಗೌಡ, ಎಂ.ಬಿ.ಸದಾಶಿವ ಮತ್ತಿತರ ಮುಖಂಡರುಗಳಿದ್ದು, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಮೃತದೇಹವನ್ನು ಯು.ಡಿ.ಶೇಖರ್ ಪಿ.ಡಿ.ಒ. ಆಗಿ ಕಾರ್ಯನಿರ್ವಹಿಸಿದ ಐವರ್ನಾಡು ಮತ್ತು ಸುಬ್ರಹ್ಮಣ್ಯ ಗ್ರಾ.ಪಂ. ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಡುವ ಉದ್ಧೇಶದಿಂದ ಅಲ್ಲಿಗೆ ಕೊಂಡೊಯ್ಯಲಾಯಿತು.