ನಾಳೆ ಕೂತ್ಕುಂಜದಲ್ಲಿ ತಾಳೆಮದ್ದಳೆ ಸಪ್ತಾಹ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಶಿವಾಜಿ ಯುವಕ ಮಂಡಲ ಕೂತ್ಕುಂಜ ಸಹಭಾಗಿತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ-2022 ಕೂತ್ಕುಂಜ ಅಟಲ್ ಜಿ ಕ್ರೀಡಾಂಗಣದಲ್ಲಿ ನ.5 ರಂದು ಸಂಜೆ ಗಂ.6.30 ರಿಂದ ಜರುಗಲಿದೆ.
ಕಾರ್ಯಕ್ರಮವನ್ನು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ , ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಪ್ರಗತಿಪರ ಕೃಷಿಕ ದಿವಾಕರ ಬಿಳಿಮಲೆ‌ ಹಾಗೂ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಪಾಲ್ಗೊಳ್ಳಲಿದ್ದಾರೆ. ತಾಳಮದ್ದಳೆ ಪ್ರಸಂಗ ‘ಉತ್ತರನ ಪೌರುಷ’. ಭಾಗವತರಾಗಿ ಪ್ರಶಾಂತ್ ಪಂಜ, ಕು.ರಚನಾ ಚಿದ್ಗಲ್ಲು, ಮದ್ದಳೆ- ಚಂದ್ರಶೇಖರ ಗುರುವಾಯನಕೆರೆ , ಚೆಂಡೆ -ಕುಮಾರ ಸುಬ್ರಹ್ಮಣ್ಯ, ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಬಂಟ್ವಾಳ ಜಯರಾಮ ಆಚಾರ್ಯ, ವೆಂಕಟೇಶ್ ಕುಮಾರ್, ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ .ಎಂದು ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.