ಗೂನಡ್ಕದಿಂದ ಮೂಡಿಗೆರೆ ದೇವಳಕ್ಕೆ ಕೊಡಿಮರದ ಮೆರವಣಿಗೆ

0

 

 

ಸುಳ್ಯದಲ್ಲಿ ಪುಷ್ಪಾರ್ಚನೆಗೈದು ಸ್ವಾಗತಿಸಿದ ಸಂಘಟನೆಯ ಕಾರ್ಯಕರ್ತರು

ಸುಳ್ಯದ ಗೂನಡ್ಕದಿಂದ ಮೂಡಿಗೆರೆ ದರೆಗುಡ್ಡೆ ಮಹಾತೋಬಾರ ಶ್ರೀ ಇಟಲ ಸೋಮನಾಥೇಶ್ವರ ದೇವಸ್ಥಾನಕ್ಕೆ ನೂತನ ಧ್ವಜಸ್ಥಂಭದ ( ಕೊಡಿ ಮರದ) ಮೆರವಣಿಗೆಯು ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗಿತು. ಈ ಸಂದರ್ಭದಲ್ಲಿ ಗಾಂಧಿನಗರದಲ್ಲಿ ಸುಳ್ಯ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಕೊಡಿಮರಕ್ಕೆ ಪುಷ್ಪಾರ್ಚನೆ ಗೈದು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಶುಭ ಕೋರಿದರು.

 

 

ಹಿರಿಯರಾದ ಗಿರೀಶ್ ದೇಂಗೋಡಿ, ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಎ.ಪಿ.ಯಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಬಜರಂಗದಳ ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ, ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಮಹೇಶ್ ರೈ ಮೇನಾಲ, ವಾಸುದೇವ ನಾಯಕ್ ಬೂಡು, ಗುರುಸ್ವಾಮಿ ಬೀರಮಂಗಲ, ದಯಾನಂದ ಕುರುಂಜಿ,
ಉದ್ಯಮಿ ರಾಧಾಕೃಷ್ಣ ರೈ ಆಲೆಟ್ಟಿ, ನಿಖೇಶ್ ಉಬರಡ್ಕ, ಸತೀಶ್ ಕುಲಾಲ್ ಆಲೆಟ್ಟಿ, ಪ್ರಕಾಶ್ ಯಾದವ್ ಸುಳ್ಯ, ನವೀನ್ ಎಲಿಮಲೆ, ಕಿಶೋರ್ ಕಾಯರ್ತೋಡಿ ಹಾಗೂ ಸಂಘಟನೆಯ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ದೇವಸ್ಥಾನದ ಅರ್ಚಕ ನಾಗರಾಜ ಭಟ್ ರವರು ಪೂಜೆಯನ್ನು ನೆರವೇರಿಸಿ ಪ್ರಸಾದ ನೀಡಿದರು. ಮೂಡಿಗೆರೆಯ ಅರಮನೆ ಮನೆತನದ ವಿಮಲ್ ಕುಮಾರ್, ಮೂಡಿಗೆರೆ ಬಿಜೆಪಿ ಮುಖಂಡ ಸುಖೇಶ್ ಶೆಟ್ಟಿ ಯವರು ಮೆರವಣಿಗೆಯ ನೇತೃತ್ವ ವಹಿಸಿದ್ದು ಸರ್ವರಿಗೂ ವಂದಿಸಿದರು.