ಸುರಭಿ ಕುಡೆಕಲ್ಲುರವರಿಗೆ ಒಕ್ಕಲಿಗ ವಾಯ್ಸ್ ಪ್ರಶಸ್ತಿ

0

 

 

ರಾಮನಗರ ಜಿಲ್ಲೆಯ ಸಾಹಿತ್ಯ ಸಂಗಮ ಟ್ರಸ್ಟ್ ಮತ್ತು ಬೆಂಗಳೂರಿನ ಒಕ್ಕಲಿಗ ವಾಯ್ಸ್ ಪತ್ರಿಕೆಯು ತನ್ನ ವಾರ್ಷಿಕ ಸಮಾವೇಶದಲ್ಲಿ ಕೊಡಮಾಡುವ ರಾಜ್ಯಮಟ್ಟದ ಕಿರಿಯರ ವಿಭಾಗದ ಪ್ರಶಸ್ತಿಯನ್ನು ಸುಳ್ಯದ ಕು. ಸುರಭಿ ಕುಡೆಕಲ್ಲುರವರಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ರಾಜ್ಯ ಒಕ್ಕಲಿಗ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಅಕ್ಟೋಬರ್ ೩೦ ರಂದು ರವಿಯವರಿಗೆ ಗಣ್ಯರ ಸಮ್ಮುಖದಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯಲ್ಲಿ ಪ್ರಸನ್ನನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಜಯರಾಮ ರಾಯಪುರ, ಮಾಜಿ ಹೈಕೋರ್ಟ್ ನ್ಯಾಯಾಧೀಶರುಗಳಾದ ಸದಾಶಿವ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಕು. ಸುರಭಿ ಅವರು ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿದ್ದಾರೆ ಅಲ್ಲದೆ ಚಿತ್ರಕಲೆ, ಆರ್ಟ್ ಮತ್ತು ಕ್ರಾಫ್ಟ್, ಲ್ಯಾಂಡ್ ಸ್ಕೇಪ್ ಮೊದಲಾದ ಕ್ಷೇತ್ರದಲ್ಲಿ ಅಪ್ರತಿಮ ಕಲಾವಿದರಾಗಿದ್ದಾರೆ. ಮೂಲತಃ ಸುಳ್ಯದವರಾದ ಇವರು ಬಡ್ಡಕ್ಕದಲ್ಲಿರುವ ಕುಡೆಕಲ್ಲು ತೇಜಕುಮಾರ್ ಮತ್ತು ಜಯಲಲಿತಾ ದಂಪತಿಗಳ ಪುತ್ರಿ. ಇವರು ಸೆಪ್ಟೆಂಬರ್ ತಿಂಗಳಲ್ಲಿ ಹಿಮಾಲಯ ಪರ್ವತಾರೋಹಣಗೈದಿದ್ದು, ಈ ಬಾರಿ ಇವರು 4ಬಾರಿಯ ಪರ್ವತಾರೋಹಣಗೈದಿದ್ದಾರೆ.