ಶ್ರೀ ಕ್ಷೇತ್ರ ಧ.ಗ್ರಾ.ಯೋ. ಪಂಜ ವಲಯದ ಒಕ್ಕೂಟಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

0

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯದ ನೂತನ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವು ಶಾರದಾಂಬ ಭಜನಾ ಮಂದಿರದಲ್ಲಿ ನ.‌ 4ರಂದು ನಡೆಯಿತು. ವಲಯ ಅಧ್ಯಕ್ಷರಾದ ಧರ್ಮಪಾಲ ಕಣ್ಕಲ್ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ದ.ಕ. ಜಿಲ್ಲೆ ಎರಡರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಕ್ಷೇತ್ರದ ಹಿನ್ನೆಲೆ, ಯೋಜನೆಯ ವಿಸ್ತಾರ, ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ತಾಲೂಕು ಯೋಜನಾಧಿಕಾರಿ ನಾಗೇಶ್ ಪಿಯವರು ಪ್ರಗತಿನಿಧಿ ಕಾರ್ಯಕ್ರಮಗಳ ನಿಯಮಾವಳಿಗಳು, ಪ್ರಗತಿ ನಿಧಿಗೆ ನೀಡಬೇಕಾದ ಭದ್ರತೆ, ಸಬ್ಸಿಡಿ ಸಾಲ, ಮೈಕ್ರೋ ಬಚಾತ್ ಇವುಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಕೃಷಿ ಮೇಲ್ವಿಚಾರಕರಾದ ರಮೇಶ್ ಕೃಷಿ ಕಾರ್ಯಕ್ರಮಗಳು, ಅನುದಾನ ಕಾರ್ಯಕ್ರಮಗಳು, ವಿಶೇಷ ಸಾಲಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ಲೆಕ್ಕಪರಿಶೋಧನೆಯ ತಯಾರಿ, ಪದಾಧಿಕಾರಿಗಳ ಜವಾಬ್ದಾರಿ, ಒಕ್ಕೂಟದ ದಾಖಲಾತಿಗಳು, ಬಡ್ಡಿದರದ ಬಗ್ಗೆ ಮಾಹಿತಿಯನ್ನು ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ವಲಯದ ಸೇವಾಪ್ರತಿನಿಧಿಗಳಾದ ಶ್ರೀಮತಿ ರೋಹಿಣಿ, ಶ್ರೀಮತಿ ದಯಾಮಣಿ, ಶ್ರೀಮತಿ ಕಾವೇರಿ, ಶ್ರೀಮತಿ ತಾರಾ, ಶ್ರೀಮತಿ ಭವ್ಯ, ಶ್ರೀಮತಿ ಸುಗುಣ, ತರಬೇತಿ ಸಹಾಯಕರಾದ ಮೋಹನ್ ಉಪಸ್ಥಿತರಿದ್ದರು. ಪಂಜ ವಲಯದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ ಸಂಪ ಹಾಗೂ ಅವರ ತಂಡದವರು ಕಾರ್ಯಾಗಾರದಲ್ಲಿ ಊಟೋಪಚಾರದ ನಿರ್ವಹಣೆಯನ್ನು ನಡೆಸಿದರು. ಶ್ರೀಮತಿ ರೋಹಿಣಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರಿಯಾ ಸ್ವಾಗತಿಸಿ ಶ್ರೀಮತಿ ಭವ್ಯ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಾಗಾರವನ್ನು ಮುಕ್ತಾಯಗೊಳಿಸಲಾಯಿತು.