ಸುಬ್ರಹ್ಮಣ್ಯದಲ್ಲಿ ಯು.ಡಿ. ಶೇಖರ್ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

 

ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯು.ಡಿ ಶೇಖರ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನ.5 ರಂದು ಗ್ರಾ.ಪಂ ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಯಜ್ಞೇಶ್ ಆಚಾರ್ ಅವರು ದೀಪ ಬೆಳಗಿಸಿದರು. ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಲಾಯಿತು.

 

ಬಳಿಕ ಹಲವರು ನುಡಿನಮನ ಅರ್ಪಿಸಿದರು. ಯಜ್ಞೇಶ್ ಆಚಾರ್ ಮಾತನಾಡಿ ಸುಬ್ರಹ್ಮಣ್ಯದ ಬಗ್ಗೆ ಹಲವು ಅಭಿವೃದ್ಧಿ ಕನಸ್ಸು ಹೊಂದಿದ್ದರು. ಆ ಕೆಲಸಗಳನ್ನು ಮಾಡಿ ಅವರ ಅವರಿಗೆ ದೊಡ್ಡ ಶ್ರದ್ಧಾಂಜಲಿ ಅರ್ಪಣೆ ಅಂದರು. ಸುದರ್ಶನ ಜೋಯಿಸ ಅವರು ಮಾತನಾಡಿ ಶೇಖರ್ ಅವರ ಆದರ್ಶ ನಾವು ಪಾಲಿಸೋಣ ಎಂದು ನುಡಿನಮನ ಅರ್ಪಿಸಿದರು. ಅಶೋಕ್ ನೆಕ್ರಾಜೆ ಮಾತನಾಡಿ ಸುಬ್ರಹ್ಮಣ್ಯದ ಅಭಿವೃದ್ಧಿಯ ಹರಿಕಾರ 20 ವರ್ಷಗಳ ಹಿಂದೆ ಒಂದು ಕೋಟಿ ಅನುದಾನ ತರಿಸಿದ್ದು ಶೇಖರ್ ಅವರ ಕಾರ್ಯವೈಖರಿ. ಸುಬ್ರಹ್ಮಣ್ಯದ ಜನ ಇವತ್ತು 24 ಗಂಟೆ ನೀರು ಕುಡಿಯುತ್ತಾರೆ ಎಂದರೆ ಅದಕ್ಕೆ ಕಾರಣ ಯು.ಡಿ ಶೇಖರ್ ಎಂದು ವಿಮಲಾ ರಂಗಯ್ಯ ತಿಳಿಸಿದರು, ಏನೆಕಲ್ಲಿನ ಸೈನಿಕ ರಸ್ತೆ ಮಾಡಿಸಿದ್ದು ಯು.ಡಿ ಶೇಖರ್ ಅದ್ಬುತ ಕಾರ್ಯ ವೈಖರಿಯ ವ್ಯಕ್ತಿ ಎಂದು ವಾಸುದೇವ ಬಾನಡ್ಕ ತಿಳಿಸಿದರು. ಶೇಖರ್ ಅವರ ನಿಧನ ನಮಗೆ ತುಂಬಲಾರದ ನಷ್ಟ ಎಂದು ವಿಶ್ವನಾಥ ನಡುತೋಟ ನುಡಿನಮನ ಅರ್ಪಿಸಿದರು. ನಾನು ಶೇಖರ್ ಅವರನ್ನು 25 ವರ್ಷಗಳಿಂದ ಬಲ್ಲವ. ಶೇಖರ್ ಅವರ ಮನೆ ದುಸ್ಥಿತಿಯಲ್ಲಿದೆ ಅದನ್ನು ನಾವು ಸುಬ್ರಹ್ಮಣ್ಯದವರಿದ್ದು ಸರಿ ಮಾಡಿ ಕೊಡಲು ಮುಂದಾಗ ಬೇಕೆಂದರು. ರಾಜೇಶ್‌ ಎನ್ ಎಸ್ ಮಾತನಾಡಿ ನಾರಾಯಣ ಅಗ್ರಹಾರ ಅವರು ಹೇಳಿದಂತೆ ಮುಂದಿನ ದಿನಗಳಲ್ಲಿ ಕೈ ಎಲ್ಲರೂ ಕೈ ಜೋಡಿಸಬೇಕೆಂದರು. ಅವರೊಂದಿಗೆ ಸ್ವಲ್ಪ ಸಮಯ ಕೆಲಸ ಮಾಡಿದ್ದೇನೆ ನಿಷ್ಟಾವಂತ ಅಧಿಕಾರಿ ಎಂದು ಪ್ರಭಾಕರ ಪಡ್ರೆ ತಿಳಿಸಿದರು.

ಗಣೇಶ್ ಪ್ರಸಾದ್ ಮಾತನಾಡಿ, ಎಲ್ಲರೊಂದಿಗೆ ಹೊಂದಿಕೊಂಡ ಅಧಿಕಾರಿ ಅಂದ್ರೆ ಯು ಡಿ ಶೇಖರ್ ಅವರು ಎಂದರು. ನನ್ನಂತಹ ವ್ಯಕ್ತಿಗೂ ಗೌರವ ಕೊಡುವ, ಪ್ರಶಸ್ತಿ ಬಂದ್ರೆ ಸುಬ್ರಹ್ಮಣ್ಯಕ್ಕೆ ಸಿಕ್ಕಿದ ಪ್ರಶಸ್ತಿ ಎಂದು ಗೌರವಿಸುವ ವ್ಯಕ್ತಿ ಯು.ಡಿ ಶೇಖರ್ ಎಂದು ರವಿ ಕಕ್ಕೆಪದವು ತಿಳಿಸಿದರು. ಗ್ರಾ.ಪಂ ನ ಕಾನೂನಿನ ಚೌಕಟ್ಟು ಎಲ್ಲವನ್ನೂ ಅರಿತಿರುವವರೆಂದರೆ ಶೇಖರ್ ಎಂದು ಬಾಲಕೃಷ್ಣ ಮರೀಲ್ ಎಂದು ತಿಳಿಸಿದರು. ಪಂಚಾಯತ್ ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಆರಂಭಿಸಿದ್ದ ವ್ಯಕ್ತಿ ಪಿಡಿಒ ಆಗಿ ಅದ್ಬುತ ಕೆಲಸ ಮಾಡಿದರೆಂದು ಭವಾನಿಶಂಕರ್ ಪೂಂಬಾಡಿ ನುಡಿದರು. ಎಚ್ ಎಲ್ ವೆಂಕಟೇಶ್ ಮಾತನಾಡಿ ಮುಂದಿನ 25 ವರ್ಷಗಳ ಮುಂದಿನ ಯೋಜನೆ ಶೇಖರ್ ಅವರಲ್ಲಿತ್ತು. ಸರ್ವ ಪಕ್ಷಗಳು ಯು.ಡಿ ಶೇಖರೊಂದಿಗೆ ಒಳ್ಳೆಯ ಸಂಬಂಧವಿತ್ತು ಎಂದರು. ನಮ್ಮ ರೋಟರಿ ವತಿಯಿಂದ ಸಹಾಯ ಮಾಡಲು ಸಿದ್ದ ಎಂದು ಗೋಪಾಲ ಎಣ್ಣೆಮಜಲು ತಿಳಿಸಿದರು. ಸಾಮಾನ್ಯನಿಗೆ ಸಮಾನ್ಯವಾಗಿ ಅಸಾಮಾನ್ಯನಿಗೆ ಅಸಾಮಾನ್ಯನಾಗಿ ಕಂಡಂತ ಅಪೂರ್ವ ವ್ಯಕ್ತಿ ಎಂದು ಭರತ್ ನೆಕ್ರಾಜೆ ನುಡಿದರು. ಸಮರ್ಪಣಾ ಮನೋಭಾವದ ಮನುಷ್ಯ ಅಂದರೆ ಯು ಡಿ ಶೇಖರ್, ಸುಬ್ರಹ್ಮಣ್ಯ ಜನರ ಮೇಲೆ ಶೇಖರ್ ಅವರಿಗೆ ಅಪಾರ ನಂಬಿಕೆ. ಅವರ ಕೊಡುಗೆಗೆ ಸುಬ್ರಹ್ಮಣ್ಯ ಜನತೆ ಬೆಲೆ ಕಟ್ಟಲು ಯಾರಿಂದಲೂ ಸಾದ್ಯವಿಲ್ಲ.
ಬಾಲಕೃಷ್ಣ ಮರೀಲ್, ಅಚ್ಚುತ ಗೌಡ, ಸುದೀಪ್, ಮಾಯಿಲಪ್ಪ ಸಂಕೇಶ, ಉದಯಕುಮಾರ್,
ಮೋಹನ ಗೌಡ ಕೋಟಿಗೌಡನ ಮನೆ, ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ ಮತ್ತಿತರರು ನುಡಿನಮನ ಅರ್ಪಿಸಿದರು.