ಅರಂಬೂರು: ಋತಾಯು ಸ್ವಾಸ್ಥ್ಯ ಕೇಂದ್ರ ನ. 7ರಂದು ಶುಭಾರಂಭ

0

ನೂತನ ಆಯುರ್ವೇದ ಸ್ವಾಸ್ಥ್ಯ ಕೇಂದ್ರ ಋತಾಯು ನವೆಂಬರ್ 7ರಂದು ಸೋಮವಾರ ಅರಂಬೂರಿನ ಇಡ್ಯಡ್ಕ ದಲ್ಲಿರುವ ಭಾರದ್ವಾಜರ ಆಶ್ರಮದಲ್ಲಿ ಶುಭಾರಂಭಗೊಳ್ಳಲಿದೆ.
ಡಾ. ದೀನ ಪ್ರಕಾಶ್ ಭಾರದ್ವಾಜ್, ಡಾ. ರೋಹಿಣಿ ಭಾರದ್ವಾಜ್, ಡಾ. ಯಶಸ್ವಿನಿ ಭಾರದ್ವಾಜ್ ಮತ್ತು ಡಾ. ವಿನಯ ಶಂಕರ ಭಾರದ್ವಾಜ್ ರವರು ಸೇರಿ ಆರೋಗ್ಯ ಸೇವೆ ನೀಡಲಿರುವ ಋತಾಯು ಸ್ವಾಸ್ಥ್ಯ ಕೇಂದ್ರದಲ್ಲಿ ಎಲ್ಲಾ ತರಹದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು.
ವಿಶೇಷವಾಗಿ ಆಹಾರ ಮತ್ತು ಜೀವನ ಶೈಲಿಯ ವಿಶ್ಲೇಷಣೆ, ವಿಶೇಷ ನಾಡಿಪರೀಕ್ಷೆ, ರೋಗ ಸಾಧ್ಯತೆಗಳ ವಿಶ್ಲೇಷಣೆ, ಸ್ವಾಸ್ಥ್ಯರಕ್ಷಣೆ ಹಾಗೂ ರೋಗ ನಿರೋಧಕ ವಿಧಾನಗಳ ಬಗ್ಗೆ ತಿಳುವಳಿಕೆ, ಗರ್ಭಿಣಿ- ಬಾಣಂತಿ- ಶಿಶು ಆರೈಕೆ , ಪಂಚಕರ್ಮ ಚಿಕಿತ್ಸೆ ರಸಾಯನ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಅರಂಬೂರು ಮರದ ಡಿಪೋದ ಪಕ್ಕದಿಂದ ಒಳಗಡೆ ಹೋಗುವ ರಸ್ತೆಯಲ್ಲಿ ಭಾರದ್ವಾಜ್ ಆಶ್ರಮದ ಸ್ಥಳದಲ್ಲಿ ಈ ಸ್ವಾಸ್ಥ್ಯ ಕೇಂದ್ರ ನಿರ್ಮಾಣಗೊಂಡಿದೆ. ನವೆಂಬರ್ 7ರಂದು ಸಂಜೆ 4ರಿಂದ 7ಗಂಟೆವರೆಗೆ ಉದ್ಘಾಟನಾ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ನಡೆಯಲಿದೆ.