ಕಲ್ಲುಗುಂಡಿ-ಕಡಪಾಲ ಆದಿಮೊಗೇರ್ಕಳ ದೈವಸ್ಥಾನಕ್ಕೆ ಓ.ಎಂ.ಸುರೇಂದ್ರ ದಂಪತಿಗಳಿಂದ ಮಹಾದ್ವಾರ ಕೊಡುಗೆ

0

ಕಲ್ಲುಗುಂಡಿ ಕವಿತಾ ವೈನ್ಸ್ ಮಾಲಕ ಓ.ಎಂ.ಸುರೇಂದ್ರರವರು ನಿರ್ಮಿಸಿಕೊಟ್ಟ ಇತ್ತಿಚೇಗೆ ಬ್ರಹ್ಮಕಲಶಗೊಂಡ ಕಲ್ಲುಗುಂಡಿ-ಕಡಪಾಲ ಆದಿಮೊಗೇರ್ಕಳ ದೈವಸ್ಥಾನ ಇದರ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರವನ್ನು ಓ.ಎಂ.ಸುರೇಂದ್ರರವರು ನೆರೆವೇರಿಸಿದರು.

ನಂತರ ದೈವಸ್ಥಾನದಲ್ಲಿ ದೀಪಾರಾಧನೆ, ವಿಶೇಷ ಪೂಜೆ ನಡೆಯಿತು. ಬಳಿಕ ಓ.ಎಂ.ಸುರೇಂದ್ರ ದಂಪತಿಗಳನ್ನು ದೈವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲುಗುಂಡಿ ವರ್ತಕ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ಮಾಜಿ ಅಧ್ಯಕ್ಷ ನವೀನ್ ರೈ, ಶ್ರೀ ಆದಿಮೊಗೇರ್ಕಳ ದೈವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ಆಚಾರ್ಯ, ಗೌರವಾಧ್ಯಕ್ಷ ತೇಜೇಶ ಕಡಪಾಲ, ಅಧ್ಯಕ್ಷ ಬಾಲಕೃಷ್ಣ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಸ್ವಾಗತಿಸಿ, ತೇಜೇಶ ಕಡಪಾಲ ವಂದಿಸಿದರು.