ದುಬೈಗೆ ತೆರಳುತ್ತಿರುವ ಸಿದ್ದಿಕ್ ಗೂನಡ್ಕರಿಗೆ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಬೀಳ್ಕೊಡುಗೆ

0

 

 

ಉದ್ಯೋಗ ನಿಮಿತ್ತ ದುಬೈಗೆ ತೆರಳುತ್ತಿರುವ ದ.ಕ.ಜಿಲ್ಲಾ ಬ್ಲಡ್ ಸೈಬೋ ಮುಖಂಡ SSF ಸಂಘಟನೆಯ ಕೋಶಾಧಿಕಾರಿ,ಗೂನಡ್ಕದ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯ, ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಿದ್ದೀಕ್ ಗೂನಡ್ಕರವರನ್ನು ಗೂನಡ್ಕ ಅಲ್ ಅಮೀನ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಗೂನಡ್ಕ ಬದ್ರಿಯಾ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಅಲೀ ಸಖಾಫಿ, ಅಸೋಸಿಯೇಶನ್ ಸ್ಥಾಪಕಾಧ್ಯಕ್ಷರು ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಸಿದ್ದೀಕ್ ರವರ ಸಾಮಾಜಿಕ ಸೇವೆಯ ಬಗ್ಗೆ ಅಭಿನಂದಿಸಿ ಶುಭಹಾರೈಸಿದರು.
ಬದ್ರಿಯಾ ಜುಮಾ ಮಸೀದಿಯ ಸದರ್ ಮುಅಲ್ಲಿಂ ಹಬೀಬ್ ಹಿಮಮಿ, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎ.ಟಿ.ಹಸನ್ ದೊಡ್ಡಡ್ಕ, ಸಂಘಟನಾ ಕಾರ್ಯದರ್ಶಿ ಟಿ.ಬಿ.ಅಝೀಝ್, ಕೋಶಾಧಿಕಾರಿ ಡಿ.ಎಂ.ಅಬ್ದುಲ್ಲಾ, ಕಾರ್ಯದರ್ಶಿಗಳಾದ ಜಿ.ಎಂ.ಅಬ್ದುಲ್ಲಾ ಹಾಗೂ ನಿರ್ದೇಶಕರಾದ ಮಹಮ್ಮದ್ ಪೆಲ್ತಡ್ಕ ಉಪಸ್ಥಿತರಿದ್ದರು.