ಮಂಗಳೂರು ಮ್ಯಾರಥಾನ್ ನಲ್ಲಿ ಧನುಷ್ ದೇವರಗುಂಡ ದ್ವಿತೀಯ

0

ನ.6ರಂದು ಮಂಗಳೂರಿನಲ್ಲಿ ಜರುಗಿದ ಮಂಗಳೂರು ಮ್ಯಾರಥಾನ್ ನಲ್ಲಿ ಭಾಗವಹಿಸಿದ ಮಂಡೆಕೋಲು ಗ್ರಾಮದ ಧನುಷ್ ದೇವರಗುಂಡ 5 ಕೀ.ಮೀ. ವಿಭಾಗದ ಮ್ಯಾರಥಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ನ.5 ರಂದು ಅರಂತೋಡಿನಲ್ಲಿ ಜರುಗಿದ ಸುಳ್ಯ ತಾಲೂಕು ಮಟ್ಟದ ಪದವಿ ಪೂರ್ವ ಇಲಾಖೆಯ ಕ್ರೀಡಾಕೂಟದ 1500 ಮೀ, 3000 ಮೀ, ಹಾಗೂ 5000 ಮೀ ಓಟದಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಯೂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ವಿದ್ಯಾರ್ಥಿ ಯಾಗಿರುವ ಧನುಷ್, ದೇವರಗುಂಡ ಶಿವರಾಮ ಗೌಡ ಹಾಗೂ ಮಲ್ಲಿಕಾ ದಂಪತಿಗಳ ಪುತ್ರ.